CONNECT WITH US  

ಪಂಚರ್

ರಾಹುಲ್‌ ಮಾತಾಡಲು ಕಲಿತಿದ್ದು ಸಂತೋಷ, ಎಲ್ಲಿ ಭೂಕಂಪವಾಗಿದೆ ಎಂದು ನನಗೆ ತಿಳಿಸಿ: ಮೋದಿ ವ್ಯಂಗ್ಯ
* ಅವರು ಆಡಿದ್ದು ಒಂದೇ ಮಾತರಂ!
ಪಾರ್ಕಿಂಗ್‌ ಜಾಗ ಇದ್ದರಷ್ಟೇ ಕಾರು ನೋಂದಣಿ.
* ಇದೊಂಥರ ತೊಟ್ಟಿಲು ಇದ್ರೇನೇ ಮಕ್ಕಳನ್ನು ಹೆರಬಹುದು ಅಂದ್ಹಂಗೆ!
ಕೇಂದ್ರ-ಕೇಜ್ರಿ ನಡುವೆ ಸಿಲುಕಿ ಕಂಗಾಲಾಗಿದ್ದ ನಜೀಬ್‌ ಜಂಗ್‌ ಹಠಾತ್‌ ರಾಜೀನಾಮೆ.
* ಮಾವಾ ಮಾವಾ ಮಸ್ತಿ,ಆಡು ಜಂಗೀ ಕುಸ್ತಿ... ಹಾಡು ಕೇಳಿ ಸುಸ್ತಾಗಿರಬೇಕು!
ಕ್ಯಾಶ್‌ಲೆಸ್‌ ವ್ಯವಹಾರ ನಮಗಲ್ಲ.: ಎಚ್‌.ಡಿ.ದೇವೇಗೌಡ.
* ಅಲ್ಲೇನಿದ್ರೂ ಕ್ಯಾಶ್‌ ಅಂಡ್‌ ಕ್ಯಾರಿ!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾರೀ ಲಂಚ ಸ್ವೀಕಾರದ ಗಂಭೀರ ಆರೋಪ.
*ಅಂತೂ ರಾಹುಲ್‌ ರಾಕ್ಸ್‌!
ಹಳೇ ನೋಟು ಜಮೆ: 5,000 ರೂ.ನಿ¬ರ್ಬಂಧ ಸಡಿಲ. ಕೆವೈಸಿ ಪಾಲಿಸುವ ಗ್ರಾಹಕರಿಗೆ ಯಾವುದೇ ವಿಚಾರಣೆ ಇಲ್ಲ
* ರಿವರ್ಸ್‌ ಬ್ಯಾಂಕ್‌ ಆಫ್ ಇಂಡಿಯಾ!
ಟಿಟಿಡಿಯ ಮಾಜಿ ಸದಸ್ಯ, 150 ಕೋಟಿ ರೂ. ಸಂಪತ್ತಿನ ಒಡೆಯ ಶೇಖರ್‌ ರೆಡ್ಡಿ ಅರೆಸ್ಟ್‌.
* ದೇವರ ದುಡ್ಡಿಗೂ ಬೆಲೆಯಿಲ್ಲವೇ!
ತಮಿಳ್ನಾಡು ಮುಖ್ಯ ಕಾರ್ಯದರ್ಶಿಗೆ ಐಟಿ ಶಾಕ್‌.
*"ಅಮ್ಮ' ಇಲ್ಲದ ತಬ್ಬಲಿಗಳಿಗೇ ಕಷ್ಟ ಬರೋದು!
ಕಳ್ಳನೊಂದಿಗೆ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿದ ವಿಶ್ವ ನಂ.11 ಟೆನಿಸ್‌ ಆಟಗಾರ್ತಿ
* ಕಳ್ಳನೊಂದಿಗೆ ಪ್ರೀತಿ ಮಾಡಲು ಸಾಧ್ಯವಿತ್ತೇ?
ಪ್ರಧಾನಿ ಮೋದಿ ಬಟ್ಟೆ ಬದಲಿಸಿದಂತೆ ಆರ್‌ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್‌ ಗಾಂಧಿ
* ಬಟ್ಟೆ ಬದಲಾಯಿಸೋದನ್ನು ಅವರು ಯಾಕ್‌ ನೋಡಿದ್ರೋ ಗೊತ್ತಾಗ್ಲಿಲ್ಲ!
ಸ್ಪೀಕರ್‌ ದಂಡ ಕಸಿದು ಟಿಎಂಸಿ ಶಾಸಕ ಪರಾರಿ!
* ದಂಡ ಪಿಂಡ!
ಭಾರತದಲ್ಲೇ ಐಫೋನ್‌ ಉತ್ಪಾದನೆಗೆ ಕೇಂದ್ರದೊಂದಿಗೆ ಆ್ಯಪಲ್‌ ಮಾತುಕತೆ
* ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಯಾವತ್ತೋ ಉತ್ಪಾದನೆ ಶುರುವಾಗಿದೆ!
ಉತ್ತರಾಖಂಡದಲ್ಲಿ ಇನ್ನು ಕೇಳಿದವರಿಗೆಲ್ಲಾ ಪ್ರಾರ್ಥನೆಗೆ 15 ನಿಮಿಷ ವಿರಾಮ!
* ಪ್ರಾರ್ಥನೆಗೆ ಸಮಯ ಕೊಡಿ ಎಂದು ಪ್ರಾರ್ಥನೆ ಮಾಡಬೇಕಿಲ್ಲ
ಗಂಭೀರ ಭದ್ರತಾ ಲೋಪ: ಇಂಗ್ಲೆಂಡ್‌ ಕ್ರಿಕೆಟಿಗರ ಮಾಹಿತಿ ಸೋರಿಕೆ!
* ಅದಕ್ಕೆ ಭಾರತ ವಿರುದ್ಧ ಸೋತಿದ್ದು ಎಂದು ಆರೋಪಿಸದಿದ್ದರೆ ಸಾಕು.
ಮಾಯಾವತಿ ಹುಟ್ಟುಹಬ್ಬಕ್ಕೆ ಈ ಬಾರಿ ನೋಟಿನ ಹಾರ ಇಲ್ಲ.
* ಪಿಂಕ್‌ ಹಾರ ದುಬಾರಿ ಅಂತ ಗೊತ್ತಾಗಿರಬೇಕು!
ಐಪಿಎಲ್‌ 10ನೇ ಆವೃತ್ತಿ: ಇಶಾಂತ್‌, ಪೀಟರ್ಸನ್‌, ಸ್ಟೇನ್‌ ಕೈಬಿಟ್ಟ ಫ್ರಾಂಚೈಸಿಗಳು
* ಗೆಲ್ಲೋ ಕುದುರೆಗಳ ಬಾಲ ಹಿಡೀತಾರೆ ಫ್ರಾಂಚೈಸಿಗಳು ...!
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಾರ್ದನ ಪೂಜಾರಿ ವಾಗ್ಧಾಳಿ
* ಪೂಜಾರಿ ಸದಾ ಪೂಜೆ ಮಾಡ್ತಾನೇ ಇರ್ತಾರೆ!
ಜನ್ಮದಿನದಂದು ಸಲ್ಮಾನ್‌ ಖಾನ್‌ ಆ್ಯಪ್‌ ಬಿಡುಗಡೆ
*ಹಮ್‌ ಆ್ಯಪ್‌ ಕೆ ಹೈ ಕೌನ್‌!
ಜಿಎಸ್‌ಟಿ ಜಾರಿ ಜುಲೈಗೆ ಮುಂದೂಡಿಕೆ ಸಾಧ್ಯತೆ.
-ಬೇಡ.. ಹೋಗ್ಲಿ ಬಿಡಿ, ಮುಂದಿನ ಸರ್ಕಾರವೇ ಮಾಡ್ಲಿ!
ನೋಟು ರದ್ದತಿ ಬಗ್ಗೆ ಮೋದಿ ಪತ್ನಿ ಖುಷ್‌.
- ಮನಮೋಹನ ಸಿಂಗ್‌ ಎಲ್ಪಿಜಿ ಬೆಲೆ ಜಾಸ್ತಿ ಮಾಡಿದಾಗ ಅವರ ಹೆಂಡ್ತಿ ಬೈದಿದ್ದರು!
25 ಕೋಟಿ ರೂ.ಗೆ ಸೇಲಾಯ್ತು ನ್ಯೂಟನ್‌ರ 1687ರ ಪುಸ್ತಕ.
-ನಮ್ಮಲ್ಲಾದ್ರೆ ರದ್ದಿ ಅಂಗಡಿಯಲ್ಲಿ ಸಿಕ್ತಿತ್ತು!
ಮೇಟಿ ಸೀಡಿ ಬಾಹುಬಲಿ ಸಿನಿಮಾಗೆ ಹೋಲಿಕೆ.
-ಇಲ್ಲಿ ಈಶ್ವರಲಿಂಗ ಹೊರುವ ಬದಲು ಹಗರಣ ಹೊತ್ಕೊಂಡ ಮಾಜಿ ಮಂತ್ರಿ!
ಇಂಗ್ಲೆಂಡ್‌ ವಿರುದ್ಧ 199 ರನ್‌ಗೆ ಔಟಾಗಿ ಚೊಚ್ಚಲ ದ್ವಿಶತಕ ತಪ್ಪಿಸಿಕೊಂಡ ಕೆ.ಎಲ್‌.ರಾಹುಲ್‌.
-ಬರೀ 1 ರನ್‌ಗೂ ಬಂತು ಬೆಲೆ!

Pages

Back to Top