CONNECT WITH US  

ಶ್ರೀಕೃಷ್ಣ ಜನ್ಮಾಷ್ಟಮಿ:120 ಜನರಿಂದ 3 ದಿನ ಉಂಡೆ, ಚಕ್ಕುಲಿ ತಯಾರಿ

ಉಡುಪಿ : ಶ್ರೀಕೃಷ್ಣಮಠದ ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬದಲ್ಲಿ ಉಂಡೆ, ಚಕ್ಕುಲಿ ಪ್ರಸಾದಕ್ಕೆ ಮಹತ್ವವಿದೆ. ಜನ್ಮಾಷ್ಟಮಿ ಮರುದಿನ ವಿಟ್ಲಪಿಂಡಿ ಹಬ್ಬದಂದು ಸಾರ್ವಜನಿಕರಿಗೆ ಪ್ರಸಾದರೂಪವಾಗಿ ಉಂಡೆ, ಚಕ್ಕುಲಿಗಳನ್ನು ವಿತರಿಸಲಾಗುತ್ತದೆ. ಒಂದೇ ದಿನದಲ್ಲಿ ಇಷ್ಟೊಂದು ಚಕ್ಕುಲಿ, ಉಂಡೆಗಳನ್ನು ತಯಾರಿಸುವುದು ಕಷ್ಟ. ಹೀಗಾಗಿ ತಯಾರಿಸುವ ಕೆಲಸ ಬುಧವಾರ ಆರಂಭಗೊಂಡಿದೆ. ಸತತ ಮೂರು ದಿನ 120 ಜನರು ಉಂಡೆ, ಚಕ್ಕುಲಿ ತಯಾರಿಸುತ್ತಾರೆ. 

15 ಕ್ವಿಂಟಾಲ್‌ ಚಕ್ಕುಲಿ ಹಿಟ್ಟು, 35 ಕ್ವಿಂಟಾಲ್‌ ಉಂಡೆ ಹಿಟ್ಟು, ಅರಳನ್ನು ಬಳಸಿ 1.7 ಲಕ್ಷ ಉಂಡೆ, 1.2 ಲಕ್ಷ ಚಕ್ಕುಲಿ ತಯಾರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಸೆ. 5ರಂದೂ ಉಂಡೆ, ಚಕ್ಕುಲಿ ತಯಾರಾಗುತ್ತದೆ. ಅಂದು ಬೆಳಗ್ಗೆ ಪರ್ಯಾಯ ಶ್ರೀಗಳವರು ಸ್ವತಃ ಉಂಡೆ ಕಟ್ಟುವುದು, ಇದೇ ಉಂಡೆಗಳನ್ನು ರಾತ್ರಿ ದೇವರಿಗೆ ಸಮರ್ಪಿಸುವುದು ವಿಶೇಷ.


Trending videos

Back to Top