ದೇವಸ್ಥಾನಗಳಿಂದ ಸಂಸ್ಕೃತಿ ಉಳಿವು: ಯೋಗಾನಂದ ಶ್ರೀ

ಸುಳ್ಯ : ಎಲ್ಲ ಕಾಲದಲ್ಲೂ ಧರ್ಮ ಅಧರ್ಮಗಳ ನಡುವೆ ಸಂಘರ್ಷವಾಗುತ್ತಾ ಬರುತ್ತಿದೆ. ದೇವ ಸ್ಥಾನಗಳ ನಿರ್ಮಾಣದ ಉದ್ದೇಶ ಪ್ರಕೃತಿ ಸಂರಕ್ಷಣೆ. ದೇವಸ್ಥಾನಗಳ ಮೂಲಕ ನಮ್ಮ ಸಂಸ್ಕೃತಿಯ ಮೇಲೆ ಆಗುವ ಪ್ರಹಾರವನ್ನು ತಡೆಗಟ್ಟಬಹುದು. ಧರ್ಮದಲ್ಲಿ ರಾಜಕೀಯ ಬಾರದಂತೆ ಎಚ್ಚರ ವಹಿಸಿ, ಧರ್ಮ ಜಾಗೃತಿಯಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದು ಉಪ್ಪಳ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ತಿಳಿಸಿದರು.ಅಡಾRರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಲೋಕ ಕಲಾವಿದ ದಯಾನಂದ ಕತ್ತಲ್ಸಾರ್ ಉಪನ್ಯಾಸ ನೀಡಿ, ತುಳು ನಾಡಿನಲ್ಲಿ ಬದುಕುವವರು ಸಂಸ್ಕಾರಯುತ ಜನ. ಆದ್ದರಿಂದ ಇಲ್ಲಿ ಸುನಾಮಿ, ಭೂಕಂಪಗಳಂತ ಘಟನೆಗಳು ಸಂಭವಿಸುವುದಿಲ್ಲ. ಇಲ್ಲಿ ಪ್ರಕೃತಿ ಆರಾಧನೆ ಮತ್ತು ನಾಗನ ಆರಾಧನೆ ಮೂಲಕ ಸಮಾಜ ಮತ್ತು ಕುಟುಂಬವನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸಭಾಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ವಹಿಸಿ, ದೇವ ಸ್ಥಾನಗಳು ಜೀರ್ಣೋದ್ಧಾರಗೊಂಡಾಗ ಹಿಂದೂ ಧರ್ಮಜೀರ್ಣೋದ್ಧಾರ ಗೊಳ್ಳುತ್ತಿದೆ. ಇದರೊಂದಿಗೆ ಗ್ರಾಮದ ಅಭಿವೃದ್ಧಿಯೂ ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಪುತ್ತೂರು ವಲಯ ಅರಣ್ಯಾಧಿಧಿಕಾರಿ ಕಾರ್ಯಪ್ಪ, ಪಂಜ ವಲಯ ಅರಣ್ಯಾಧಿಧಿಕಾರಿ ಪ್ರವೀಣ್ ಶೆಟ್ಟಿ, ಪುತ್ತೂರು ಶ್ರೀಪಂಚಲಿಂಗೇಶ್ವರ ದೇವ ಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಚ್ಯುತ ಮೂಡಿತ್ತಾಯ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡ ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಗೌರವಾ ಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ.ಕೆ. ಭಾಸ್ಕರ ಪಟೇಲ್ ಮನೆ, ದೇವದಾಸ್ ಕುಕ್ಕುಡೇಲು ಮತ್ತು ಬೈಲ್ವಾರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕ್ಷೇತ್ರದ ಜ್ಯೋತಿಷರು ಉಣ್ಣಿ ಕೃಷ್ಣನ್ ಮತ್ತು ಎಂಜಿನಿಯರ್ ಶ್ಯಾಂಪ್ರಸಾದ್ ಅಡ್ಡಂತಡ್ಕ ಅವರನ್ನು ಸಮ್ಮಾನಿಸಲಾಯಿತು.
ಶರತ್ ಅಡಾRರ್ ಸ್ವಾಗತಿಸಿ, ಪ್ರಸಾದ್ ಕಾಟೂರು ವಂದಿಸಿದರು. ಕಮಲಾಕ್ಷ ನಂಗಾರು ನಿರೂಪಿಸಿದರು.
ಇಂದು ಬ್ರಹ್ಮಕಲಶಾಭಿಷೇಕ
ಫೆ. 22ರಂದು ಬೆಳಗ್ಗೆ ಗಣಪತಿ ಹೋಮ, ಕವಾಟೋದ್ಘಾಟನೆ, ಪ್ರಾಯಶ್ಚಿತ್ತ ಮತ್ತು ಶಾಂತಿ ಹೋಮ, ಕಲಶಾಭಿಷೇಕ, 1008 ಬ್ರಹ್ಮಕಲ ಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆಯಾಗಲಿದೆ.ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ ಸಮರ್ಪಣಾ ನಡೆಯಲಿದೆ. ಅಧ್ಯಕ್ಷತೆ ಯನ್ನು ಶಾಸಕ ಎಸ್. ಅಂಗಾರ ಅವರು ವಹಿಸಲಿದ್ದಾರೆ. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಬ್ರಹ್ಮಶ್ರೀ ರವೀಶ ತಂತ್ರಿವರ್ಯರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ, ಬೆಳ್ತಂಗಡಿ ಹರೀಶ್ ಪೂಂಜ, ಮಂಗಳೂರು ಜಿಲ್ಲಾ ಹಾಲು ಉತ್ಪಾದಕರ ಮಹಾಮಂಡಲದ ಅಧ್ಯಕ್ಷ ರವಿರಾಜ ಹೆಗ್ಡೆ ಭಾಗವಹಿಸಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಲಾವಿದರ ಕೂಡುವಿಕೆ ಯಿಂದ ದಕ್ಷಾಧ್ವಾರ-ಕುಮಾರ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.
ಬಸ್ ಸೌಲಭ್ಯ
ಮುಖ್ಯ ರಸ್ತೆಯಿಂದ ದೇವಸ್ಥಾನ ದವರೆಗೆ ಉಚಿತ ಬಸ್ ವ್ಯವಸ್ಥೆಯನ್ನು ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆ ಒದಗಿಸಲಿದೆ.