CONNECT WITH US  

ಧರ್ಮದ ಹೆಸರಿನಲ್ಲಿ ಅಡಿಯಾಳಾಗಬೇಡಿ : ಹರಿಪ್ರಸಾದ್‌

ಬೆಳ್ತಂಗಡಿ: ಹಿಂದುಳಿದ ವರ್ಗದ ಜನರು ಅಕ್ಷರಸ್ಥರಾದರೆ ಸಾಲದು, ಸುಶಿಕ್ಷಿತರಾಗಬೇಕು, ವಿದ್ಯಾವಂತರಾಗಬೇಕು. ಧರ್ಮ, ಜಾತಿಯ ಹೆಸರಿನಲ್ಲಿ ಕೆಲವರ ಅಡಿಯಾಳಾಗಿ ಅವರ ಸ್ವಾರ್ಥಕ್ಕಾಗಿ ಬಳಕೆಯಾಗದೆ ನಾರಾಯಣ ಗುರುಗಳೆಂದಂತೆ ವಿದ್ಯೆಯಿಂದ ಸ್ವತಂತ್ರರಾಗಲು ಕಲಿಯಿರಿ ಎಂದು ರಾಜ್ಯಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್‌ ಹೇಳಿದರು.

ಅವರು ರವಿವಾರ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 9ನೆ ವರ್ಧಂತಿ ಆಚರಣೆ ಸಂದರ್ಭ ಮಾತನಾಡಿದರು.

ಸಮಾಜ ಮುಂದೆ ಬರಲು ಹಿಂದೆ ಗುರು, ಮುಂದೆ ಗುರಿ ಇರಬೇಕು. ಬ್ರಾಹ್ಮಣರು ಮಾತ್ರ ಸ್ವಾಮಿಗಳಾಗುತ್ತಿದ್ದ ಕಾಲ ಹೋಗಿ ಎಲ್ಲ ವರ್ಗದವರೂ ಸ್ವಾಮಿಗಳಾಗುವ ದಿನಗಳಲ್ಲಿ ನಾವಿದ್ದು ಹಿಂದುಳಿದ ವರ್ಗಕ್ಕೆ ಒಬ್ಬ ಸಮರ್ಥ ಗುರು ದೊರೆತಿದ್ದಾರೆ. ಇವರಿಂದ ನಡೆಯುತ್ತಿರುವ ವಿದ್ಯಾದಾನಕ್ಕಿಂತ ದೊಡ್ಡದಾನ ಬೇರಿಲ್ಲ. ಹಿಂದುಳಿದ ವರ್ಗದಲ್ಲೂ ಇರುವ ದುರ್ಬಲ ವರ್ಗದ ಕಡೆಗೆ ಸಮಾಜ ಗಮನ ಹರಿಸಬೇಕು ಎಂದರು.

ಅರಣ್ಯ ಸಚಿವ ಬಿ. ರಮಾನಾಥ ರೈ, ಒಂದೇ ಜಾತಿ ಒಂದೇ ಮತ ಎಂದು ಸಾರಿದ ನಾರಾಯಣ ಗುರುಗಳ ಕನಸಿನ ಸಮಾಜ ನಿರ್ಮಾಣವಾಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಸುಖದ ಲೋಲುಪತೆಯ ಹಿಂದೆ ಬಿದ್ದು ಧರ್ಮಕ್ಕೆ ಮುಖ ತಿರುಗಿಸಿದರೆ ಅವನತಿಯ ಹಾದಿ ಹಿಡಿಯುತ್ತೇವೆ. ಬದಲಾಗಿ ಧರ್ಮದ ಹಾದಿಯಲ್ಲೇ ನಡೆದರೆ ಸುಖ ನಮ್ಮನ್ನು ಅರಸಿಕೊಂಡು ಬರುತ್ತದೆ ಎಂದರು.

ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಅಖೀಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಮೂಡಾ ಮಾಜಿ ಅಧ್ಯಕ್ಷ ಕೆ. ತೇಜೋಮಯ, ಉಡುಪಿಯ ಜನಪದ ವಿದ್ವಾಂಸ ಬಾಬು ಅಮೀನ್‌, ಮಾಜಿ ಶಾಸಕರಾದ ರುಕ್ಮಯ ಪೂಜಾರಿ ವಿಟ್ಲ, ಜೆ.ಡಿ. ನಾಯ್ಕ ಭಟ್ಕಳ, ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ತಾಲೂಕು ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಭಗೀರಥ ಜಿ., ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್‌ ಗರೋಡಿ, ಮೋಹನ್‌ ಉಜೊjàಡಿ, ಪ್ರಗತಿಪರ ಕೃಷಿಕ ಅನಂತ್ರಾಮ ರಾವ್‌ ಚಾರ್ಮಾಡಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಬಿ.ಸಿ.ರೋಡ್‌ನ‌ ವಿಶ್ವನಾಥ ಪೂಜಾರಿ, ಮುಖಂಡರಾದ ಎಸ್‌.ಎನ್‌. ಹರೀಶ್‌, ತಾರಾಮೂರ್ತಿ ಸಾಗರ, ಎಂ.ಜಿ. ನಾಯ್ಕ ಹೊನ್ನಾವರ, ರಾಜು ಕೋಟ್ಯಾನ್‌ ಉಡುಪಿ, ಶ್ರೀಧರ ನಾಯ್ಕ ಭಟ್ಕಳ, ಪುಷ್ಪಾ ಆರ್‌., ನಾಯ್ಕ, ಧರ್ಮಸ್ಥಳದ ಪ್ರತಿನಿಧಿಗಳಾದ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಭುಜಬಲಿ ಧರ್ಮಸ್ಥಳ, ಬಾಲಕೃಷ್ಣ ಪೂಜಾರಿ, ಅಣ್ಣಿ ಪೂಜಾರಿ, ಪ್ರಭಾಕರ ಡಿ. ಮೊದಲಾದವರಿದ್ದರು.

ಪಟ್ಟಾಭಿಷೇಕ ವರ್ಧಂತಿಯನ್ನು ಆಚರಿಸಲಾಯಿತು. ಧರ್ಮಸ್ಥಳದ ವತಿಯಿಂದ ಸ್ವಾಮೀಜಿಯವರಿಗೆ ಗೌರವ ಸಮ್ಮಾನ ನಡೆಯಿತು. ಟ್ರಸ್ಟಿ ತುಕಾರಾಮ ಸಾಲಿಯಾನ್‌ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಸ್ತಾವಿಸಿ, ರಾಮಚಂದ್ರ ರಾವ್‌ ನಿರ್ವಹಿಸಿದರು.


Trending videos

Back to Top