CONNECT WITH US  

ಬಸ್‌ನಿಲ್ದಾಣದಲ್ಲಿ ಗಾಂಧೀಜಿ ಕನಸಿಗೆ ಚಾಲನೆ

ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈಶಾನ್ಯ ಕರ್ನಾಟಕ ರಸ್ತೆ
ಸಾರಿಗೆ ಸಂಸ್ಥೆ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಕೇಂದ್ರ ಬಸ್‌
ನಿಲ್ದಾಣದಲ್ಲಿ ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಕುರಿತು ಆಯೋಜಿಸಿದ ಒಂದು ವಾರದ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಸ್ವಾತಂತ್ರ ಹೋರಾಟದ ಸಂದರ್ಭಗಳಲ್ಲಿ ನಗರ ಸೇರಿದಂತೆ ಕರ್ನಾಟಕಕ್ಕೆ 18 ಬಾರಿ ಭೇಟಿ ನೀಡಿರುವ ಅಪರೂಪದ ಛಾಯಾಚಿತ್ರ ಪ್ರದರ್ಶನ ಇದಾಗಿದೆ. ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ-2ರ ಎಸ್‌.ಡಿ. ಸರಿಕಾರ್‌,
ಕರ್ನಾಟಕದೊಂದಿಗೆ ಗಾಂಧೀಜಿ ಅವಿನಾಭಾವ ಸಂಬಂಧವಿದೆ. ದಕ್ಷಿಣ ಆಫ್ರಿಕಾದಲ್ಲಿ ಆರಂಭವಾದ ಹೋರಾಟಕ್ಕೆ ತಾತ್ವಿಕ ಮತ್ತು ನೈತಿಕ ಬೆಂಬಲ ದೊರೆತದ್ದು ಕರ್ನಾಟಕ ನೆಲದಿಂದಲೇ ಎನ್ನುವುದು ಈ ಚಿತ್ರಗಳಿಂದ ತಿಳಿಯಬಹುದು. ಲಂಡನ್‌ ನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಬ್ರಿಟಿಷರಿಗೆ ಉತ್ತಮ ಆಡಳಿತದ ಉದಾಹರಣೆಯಾಗಿ
ಮೈಸೂರು ಸಂಸ್ಥಾನ ಆಡಳಿತದ ಮಾದರಿ ಹೇಳಿಕೊಟ್ಟಿರುವುದು ಕರ್ನಾಟಕದ ಹೆಮ್ಮೆಯ
ಸಂಗತಿ. ಸತ್ಯದ ಅನ್ವೇಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಗಾಂಧೀಜಿ ಬದುಕನ್ನು ಅರ್ಥ ಮಾಡಿಕೊಂಡು ಅವರ ಮೌಲ್ಯಗಳನ್ನು ನಮ್ಮದಾಗಿಸಿ ಆದರ್ಶ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಎಸ್‌.ಜಿ. ಗಂಗಾಧರಪ್ಪ, ಶಶಿಧರ ರಾಘವೇಂದ್ರ ಕುಲಕರ್ಣಿ, ಬಿ.ಡಿ. ಬಸಲಿಂಗಪ್ಪ, ಬಸ್‌ ನಿಲ್ದಾಣದ ಟ್ರಾಫ್ರಿಕ್‌ ಇನಾcರ್ಜ್‌ ಅನೀಲಕುಮಾರ ಬಿ. ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಚಂದ್ರಕಾಂತ ಸ್ವಾಗತಿಸಿದರು.

Trending videos

Back to Top