CONNECT WITH US  

ಗಾಂಧೀಜಿ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ

ಕೊಪ್ಪಳ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದವರ ಸಹಯೋಗದೊಂದಿಗೆ ಕೊಪ್ಪಳದ ಕೇಂದ್ರೀಯ ಬಸ್‌ ನಿಲ್ದಾಣ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ, ಗಾಂಧೀಜಿಯವರ ಜೀವನ ಚರಿತ್ರೆಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ನಿಲ್ದಾಣಕ್ಕೆ ಆಗಮಿಸಿದ್ದ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ವೀಕ್ಷಿಸಿದರು.

ಗಾಂಧೀಜಿಯವರ ಜೀವನ ಚರಿತ್ರೆ ಕುರಿತ ಛಾಯಾ ಚಿತ್ರ ಪ್ರದರ್ಶನಕ್ಕೆ ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಎಸ್‌. ಹಾವೇರಿ ಚಾಲನೆ ನೀಡಿ ಛಾಯಾಚಿತ್ರ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾತ್ಮಾ ಗಾಂಧಿಧೀಜಿಯವರು ಸ್ವಾತಂತ್ರ ಸಂಗ್ರಾಮದ ಕಾಲಘಟ್ಟದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪೃಷ್ಯತೆಯ ನಿವಾರಣೆಗಾಗಿ ಗಾಂಧೀಜಿಯವರು ನಡೆಸಿದ ಆಂದೋಲನ, 1924 ರಲ್ಲಿ ಮಹಾತ್ಮಾ ಗಾಂಧಿಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖೀಲ ಭಾರತ ಕಾಂಗ್ರೇಸ್‌ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ
ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
 
ವಿಶೇಷ ಛಾಯಾಚಿತ್ರ ಪ್ರದರ್ಶನ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಕೆಲ ಪ್ರಯಾಣಿಕರು ಮಹಾತ್ಮಾ ಗಾಂಧೀಜಿಯವರ ಜೀವನದ ಮಹತ್ವದ ಛಾಯಾಚಿತ್ರಗಳನ್ನು ಇದುವರೆಗೂ ನೋಡಿರಲಿಲ್ಲ. ಛಾಯಾಚಿತ್ರ ಪ್ರದರ್ಶನವು ಗಾಂಧಿ ಧೀಜಿಯವರ ಜೀವನದ ಕಾಲಘಟ್ಟ ಅರಿಯಲು ಸಹಕಾರಿಯಾಯಿತು ಎಂದು ತಿಳಿಸಿದರು. 

ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್‌, ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದ ಆಡಳಿತಾಧಿಕಾರಿ ಬಿ.ಎಸ್‌. ಮುನಿರಾಮೇಗೌಡ, ಕೊಪ್ಪಳ ಬಸ್‌ ಡಿಪೋ ಮ್ಯಾನೇಜರ್‌ ಬಿ.ವಿ. ಬಟ್ಟೂರ, ಸಹಾಯಕ ಸಂಚಾರ ವ್ಯವಸ್ಥಾಪಕ ಆರ್‌.ಬಿ. ಮಾನೆ, ಸುನಿಲ್‌, ಅವಿನಾಶ್‌ ಇದ್ದರು.

Trending videos

Back to Top