CONNECT WITH US  

ಫ್ರಾನ್ಸ್‌ನಲ್ಲಿ ಜರ್ಮನ್‌ ವಿಮಾನ ಪತನ : 150 ಬಲಿ

ಇಂಡೋನೇಷ್ಯಾ ವಿಮಾನ ದುರಂತದ ನೆನಪು ಮರೆಯುವ ಮುನ್ನವೇ ಇನ್ನೊಂದು ವಿಮಾನ ಅವಘಡ ಸಂಭವಿಸಿದೆ. ಜರ್ಮನಿಯ ವಿಮಾನವೊಂದು ಫ್ರಾನ್ಸ್‌ನ ಆಲ್ಫ್ಸ್ ಪ್ರರ್ವತ ಶ್ರೇಣಿಯಲ್ಲಿ ಮಂಗಳವಾರ ಪತನಗೊಂಡಿದ್ದು, ಅದರಲ್ಲಿದ್ದ 150 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್‌ನಲ್ಲಿ ಕಳೆದ 4 ದಶಕದಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತ ಇದಾಗಿದೆ. ಘಟನೆ ನಡೆದ ಸ್ಥಳದಿಂದ ಕಪ್ಪುಪೆಟ್ಟಿಗೆಯನ್ನು ಪತ್ತೆಹಚ್ಚಲಾಗಿದೆ.

ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಅಂಗಸಂಸ್ಥೆಯಾದ ಜರ್ಮನ್‌ ವಿಂಗ್ಸ್‌ಗೆ ಸೇರಿದ ಏರ್‌ಬಸ್‌ ಎ320 ವಿಮಾನ ಆಲ್ಫ್ಸ್ ಪರ್ವತ ಶ್ರೇಣಿಯ ದುರ್ಗಮ ಪ್ರದೇಶದಲ್ಲಿ ಪತನಗೊಂಡಿದ್ದರಿಂದ ರಕ್ಷಣಾ ಕಾರ್ಯ ತೀರಾ ಕಷ್ಟಕರವಾಗಿದ್ದು, ಯಾರೂ ಕೂಡ ಬದುಕಿರುವ ಸಾಧ್ಯತೆ ಇಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷ ಹೊಲಾಂಡೆ ತಿಳಿಸಿದ್ದಾರೆ.

ಸ್ಪೇನ್‌ನ ಬಾರ್ಸಿಲೋನಾದಿಂದ ಜರ್ಮನಿಯ ಡುಸೆಲ್‌ಡೋರಫ್ ಕಡೆಗೆ ಪ್ರಯಾಣ ಬೆಳೆಸಿದ್ದ ವಿಮಾನದಲ್ಲಿ 6 ಸಿಬ್ಬಂದಿ ಸೇರಿ 144 ಮಂದಿ ಪ್ರಯಾಣಿಕರಿದ್ದರು. ವಿಮಾನ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಸಂಪರ್ಕ ಕಡಿದುಕೊಂಡಿದೆ. ವಿಮಾನ 5,000 ಅಡಿಗೆ ಇಳಿದಿದ್ದಾಗ ಅಪಾಯದ ಸಂದೇಶವನ್ನು ರವಾನಿಸಿತ್ತು. ಬಳಿಕ ಅಲ್ಫ್ಸ್ ಪರ್ವತ ಶ್ರೇಣಿಯ ಗ್ರಾಮವೊಂದರ ಬಳಿ ವಿಮಾನದ ಅವಶೇಷ ಪತ್ತೆಯಾಗಿದೆ. ಈ ಪ್ರದೇಶ 1,400 ಮೀಟರ್‌ ಎತ್ತರದಲ್ಲಿದ್ದು, ಹಿಮದಿಂದ ಆವೃತ್ತವಾಗಿದೆ.

ಹೀಗಾಗಿ ರಕ್ಷಣಾ ಕಾರ್ಯಾಚರಣೆಗೆ ಫ್ರೆಂಚ್‌ ಪೊಲೀಸ್‌ ವಿಮಾನವೊಂದನ್ನು ಬಳಸಿಕೊಳ್ಳಲಾಗಿದೆ ಎಂದು ಅಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ.

ಇದೇ ವೇಳೆ, ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕಾಸ್ಟೆìನ್‌ ನ್ಪೊಹರ್‌, ವಿಮಾನ ಅಪಘಾತಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ ಕತ್ತಲ ಆಕಾಶದಿಂದ ಈ ದುರಂತ ಸಂಭವಿಸಿರಬಹುದು ಎಂದಿದ್ದಾರೆ.
25 ವರ್ಷ ಹಳೆಯದು: ಜರ್ಮನ್‌ ವಿಂಗ್ಸ್‌ ಎ320 ವಿಮಾನ ಲುಫಾ§ನ್ಸಾ ವಿಮಾನಯಾನ ಸಂಸ್ಥೆ ಬಳಸುತ್ತಿದ್ದ ಅತಿ ಹಳೆಯ ವಿಮಾನವಾಗಿದ್ದು, ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು.

ಅಲ್ಲದೆ, ಕಡಿಮೆ ವೆಚ್ಚದ ವಿಮಾನ ಎಂಬ ಕಾರಣಕ್ಕೆ ಜನಪ್ರಿಯವಾಗಿತ್ತು. 1974ರಲ್ಲಿ ಟರ್ಕಿವಿಮಾನವೊಂದು ಪತನಗೊಂಡು 346 ಜನ ಸಾವನ್ನಪ್ಪಿದ ಬಳಿಕ ಫ್ರಾನ್ಸ್‌ ನೆಲದಲ್ಲಿ ಸಂಭವಿಸಿದ ಅತಿ ಘೋರ ದುರಂತ ಇದಾಗಿದೆ. 

ಏನಾಯ್ತು?
- ಫ್ರಾನ್ಸ್‌ನಿಂದ 150 ಜನರನ್ನು ಹೊತ್ತ ವಿಮಾನ ಜರ್ಮನಿಗೆ ತೆರಳುವ ವೇಳೆ ಅಪಘಾತ.

- ವಿಮಾನದಲ್ಲಿ 150 ಜನ ಬಲಿ 

ಎಲ್ಲಿ?
- ಬಾರ್ಸಿಲೋನಾದಿಂದ ಡುಸೆಲ್‌ಡೋರಫ್ಗೆ ತೆರಳುವ ವೇಳೆ ಆಲ್ಫ್$Õ ಪರ್ವತ ಶ್ರೇಣಿಯಲ್ಲಿ ಅವಘಡ

Trending videos

Back to Top