CONNECT WITH US  

​"ಹಿಂದು ಎಂಬುದು ಧರ್ಮವಲ್ಲ, ಜೀವನಶೈಲಿ'

ವ್ಯಾಂಕೋವರ್‌: 3 ದಿನಗಳ ಕೆನಡಾ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಕೆನಡಾ ಪ್ರಧಾನಿ ಸ್ಟೀಫ‌ನ್‌ ಹಾರ್ಪರ್‌ ಜತೆಗೂಡಿ ಗುರುದ್ವಾರ ಹಾಗೂ ಲಕ್ಷ್ಮೀನಾರಾಯಣ ಮಂದಿರಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಮೋದಿ, ಹಿಂದು ಎಂಬುದು ಧರ್ಮವಲ್ಲ. ಅದೊಂದು ಜೀವನಶೈಲಿ. ಈ ಬಗ್ಗೆ ಸುಪ್ರೀಂ ಕೋರ್ಟೇ ತೀರ್ಪು ನೀಡಿದೆ ಎಂದರು.

ಟೊರಂಟೋದಿಂದ ವ್ಯಾಂಕೋವರ್‌ಗೆ ಆಗಮಿಸಿದ ಮೋದಿ ಹಾಗೂ ಹಾರ್ಪರ್‌ ಗುರುದ್ವಾರಕ್ಕೆ ತೆರಳಿ ಅಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ವೇಳೆ ಇಬ್ಬರೂ ನಾಯಕರಿಗೆ ಗುರುದ್ವಾರದ ವತಿಯಿಂದ ಉಡುಗೊರೆ ನೀಡಲಾಯಿತು. ಈ ಸಂದರ್ಭ ಅಲ್ಲಿ ನೆರೆದಿದ್ದ ಸಿಖ್ಖ ರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ತಮ್ಮ ಕಾರ್ಯದ ಮೂಲಕ ಕೆನಡಾದಲ್ಲಿರುವ ಸಿಖ್ಖರು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ವೇಳೆ ಗುರುನಾನಕ್‌ ಬೋಧನೆಗಳನ್ನು ಪ್ರಸ್ತಾಪಿಸಿದ ಅವರು, ಭಗತ್‌ ಸಿಂಗ್‌ ಆದಿಯಾಗಿ ಸಿಖ್ಖರು ನೀಡಿರುವ ಕೊಡುಗೆಗಳನ್ನು ಗುಣಗಾನ ಮಾಡಿದರು. ತದನಂತರ, ಲಕ್ಷ್ಮೀನಾರಾಯಣ ದೇಗುಲಕ್ಕೆ ಮೋದಿ, ಹಾರ್ಪರ್‌ ಭೇಟಿ ನೀಡಿದರು. 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top