CONNECT WITH US  

​ಜಾತಕ ಫ‌ಲ

   ಜಂಗಮಪುರ, ಶ್ರೀನಾಥ ಅರಸೀಕೆರೆ

   ಒಂದೇ ಸಮ ಈ ಕೆಲ ತಿಂಗಳಿನಿಂದ ಕೆಟ್ಟ ಕನಸುಗಳು ಬೀಳುತ್ತಿವೆ. ಎಲ್ಲಿ ಹೋದರೂ ಸರ್ಪಗಳು ಹೆಡೆ ಎತ್ತಿ ನಿಂತಂತೆ. ಮಗುವೊಂದು ಬಂದು ಮೃದುವಾಗಿ ನಗುತ್ತಿರುವಂತೆಯೇ ಹುಲಿಯಾಗಿ ಪರಿವರ್ತನಗೊಂಡು ಆರ್ಭಟಿಸಿದಂತೆ ಇತ್ಯಾದಿ ನೂರಾರು ಕೆಟ್ಟ ಕನಸು. ಎಚ್ಚರವಾದಾಗ ಬೆದರಿರುತ್ತೇನೆ. ಭಯ ಆಘಾತಕ್ಕೆ ಎದೆ ಬಡಿತ ಜೋರು. ಹೃದಯಘಾತವಾದಂತೆ ಅನಿಸುತ್ತದೆ. ಮತ್ತೆ ನಿದ್ದೆಗೆ ದೊಡ್ಡ ಪರದಾಟ. ಸಮಸ್ಯೆಗೆ ಪರಿಹಾರವಿದೆಯೇ ಸ್ವಾಮಿ?

   ನಿಮ್ಮ ಜನ್ಮಕುಂಡಲಿಯ ಪರಿಶೀಲನೆ ಮಾಡಲಾಗಿ ಚಂದ್ರನ ದೋಷವೇ ಪ್ರಧಾನವಾಗಿದ್ದು ಗೋಚರಕ್ಕೆ ಬರುತ್ತಿದೆ. ಕ್ಷೀಣ ಚಂದ್ರ ರವಿಯ ಉರಿಯಲ್ಲಿ ಬೆಂದು ದುಸ್ಥಾನದಲ್ಲಿ ಶನಿಯ ಜೊತೆಗಿದ್ದಾನೆ. ವ್ಯಕ್ತಿತ್ವವನ್ನು ರೂಪಿಸುವ ಲಗ್ನ ಭಾವ ರಾಹು ಪೀಡೆಗೆ ಒಳಗಾಗಿದೆ. ಹೀಗಾಗಿ ಸಮಸ್ಯೆಗಳನ್ನು ನಮ್ಮ ಒಳಾಂತರ್ಗತ ಮಾನಸಿಕ ಸ್ತರದಲ್ಲಿ ಸಾಂಕೇತಿಕ ರೂಪದಲ್ಲಿ ಗೋಜಲಗುಳು ನಿಮ್ಮನ್ನು ಹಿಂಸಿಸುತ್ತಿವೆ. ಸದ್ಯದ ಬುಧ ದಶಾ ಕಾಲ ನಿಮ್ಮ ಪಾಲಿಗೆ ವಿರುದ್ಧವಾಗಿದೆ. ಕೇತು ದಶಾ ಕಾಲದಲ್ಲಿ ಗುರುಗ್ರಹದ ಕಾರಣವಾಗಿ ಕೇತುವಿಗೆ ಸಂವೇದನೆ ಉತ್ತಮವಾಗಿ ಒದಗುವುದರಿಂದ ಉತ್ತಮ ದಿನಗಳಿಗಾಗಿ ಆತನಕ ಕಾಯಬೇಕು. ದಿನವೂ 108 ಬಾರಿ ಚಂದ್ರ ಪೀಡಾ ನಿವಾರಣಾ ಸ್ತೋತ್ರ ಪಠಿಸಿ. ಏಳೆಂಟು ಅಕ್ಷತಗಳನ್ನು ಎಕ್ಕದ ಗಿಡದ ತಳಕ್ಕೆ ಚೆಲ್ಲಿ.

 ಶ್ರೀಲತಾ ಲಚ್ಚಾನಿ, ಬೆಂಗಳೂರು

  ನನ್ನ ಮಗಳ ಜಾತಕ ಕಳುಹಿಸಿದ್ದೇನೆ. ಒಳ್ಳೆಯ ಕೆಲಸದಲ್ಲಿದ್ದಾಳೆ. ಎರಡು ಬಾರಿ ವಿವಾಹ ನೆರವೇರಿತು. ಗಂಡಂದಿರ ಜೊತೆ ಹೊಂದಾಣಿಕೆ ಸಾಧ್ಯವಾಗದೇ ಡೈವರ್ಸ ಆಗಿದೆ. ಈಗ ಮೂರನೆಯ ನೊಬ್ಬ ಮದುವೆಗೆ ಉತ್ಸಾಹ ತೋರುತ್ತಿದ್ದಾನೆ. ಏನಾದರೂ ಪ್ರಯೋಜನ ಸಾಧ್ಯವೇ?

  ನಿಮ್ಮ ಮಗಳ ಜಾತಕದಲ್ಲಿ ವೈವಾಹಿಕ ಸುಖಕ್ಕೆ ದೇವರು ಕಷ್ಟಗಳನ್ನು ಹರಳುಗಟ್ಟಿಸಿದ್ದಾನೆ. ಮೊತ್ತ ಮೊದಲಾಗಿ ವ್ಯಕ್ತಿತ್ವದಲ್ಲಿನ ವೈರುಧ್ಯತೆ ಕೆಲವು, ಮಾಂದಿ ದೋಷದಿಂದಾಗಿ ಹರಳುಗಟ್ಟಿಸಿದ್ದಾಗಿದ್ದರೂ ಶುಕ್ರ ಗ್ರಹದ ಭಾಗ್ಯ ಸ್ಥಿತಿಗೊಂದು ತೂಕವಿರುವುದರಿಂದ ಗಂಡುಗಳು ದೊರಕುತ್ತಲೇ ಇರುತ್ತವೆ. ಅದು ನಿಮ್ಮ ಮಗಳುನ್ನು ಅನುಪಮ ಸೌಂದರ್ಯವತಿಯಾಗಿಸಿದ ಶುಕ್ರನ ಲಗ್ನದ (ವ್ಯಕ್ತಿತ್ವ, ಚಹರೆ)ಅಧಿಪತಿಯೂ ಆಗಿರುವುದರಿಂದಾದ ಬೆಳವಣಿಗೆಯಾಗಿದೆ. ಇಷ್ಟಾದರೂ ಸುಖ ಸ್ಥಾನದ ಕೆಟ್ಟ ರಾಹು, ಕುಟುಂಬ ಸ್ಥಾನದ ಅಸ್ತಂಗತ ದೋಷದ ಕುಜ, ದೋಷಕ್ಕೆ ಕಾರಣವಾಗಿ ಸಮರಸ ದಾಂಪತ್ಯಕ್ಕೆ ಅವಕಾಶ ಒದಗಿಸುವುದಿಲ್ಲ. ಸ್ವಯಂವರ ಪಾರ್ವತಿ ಸಿದ್ಧ ಕವಚ ಓದಿಸಿ. ಅದೃಷ್ಟ ಒದಗಿ ಬರಲಿ. 

 ಮೇಡಂ ಸುಜಾತಾ, ರಾಣೆಬೆನ್ನೂರು

 ನನ್ನ ಜಾತಕ ಕಳಿಸಿದ್ದೇನೆ. ಯಾರೋ ತಿಳಿದವರು ನಿನಗೆ ಗೌರಿ ಯೋಗವಿದೆ. ರಾಜ ಯೋಗ ಪ್ರಾಪ್ತಿ ಇದೆ ಎಂದಿದ್ದಾರೆ. ಆದರೆ ಬದುಕಿನಲ್ಲಿ ಸುಖಪಟ್ಟಿಲ್ಲ. ಏಕೆ?

  ನಿಮಗೆ ಗೌರಿಯೋಗವಿರುವುದು ನಿಜ. ಕರ್ಮಸ್ಥಾನ (ಹತ್ತನೆ ಭಾವದ) ಅಧಿಪತಿಯು ಸ್ಥಿತಗೊಂಡ ನವಾಂಶದ ಅಧಿಪತಿ ಕರ್ಮದಲ್ಲಿ ಉಚ್ಚನಾಗಿದ್ದರೂ ಅವನಿಗಿರುವ ರಾಹು ಹಾಗೂ ಕುಜ ದೋಷದ ಯೋಗದ ಫ‌ಲವನ್ನು 2023ರ ಆಗಸ್ಟ್‌ 8ರ ನಂತರ ಕೊಡಿಸಲು ಶಕ್ತಿ ಪಡೆಯುತ್ತಾರೆ. ಆದರೂ ಈಗ ಗೋಚರದ ಶನಿಕಾಟ ನಿಮ್ಮನ್ನು ಇನ್ನೊಂದು ರೀತಿಯಲ್ಲಿ ತಲ್ಲಣದಲ್ಲಿಡುತ್ತವೆ. ಶ್ರೀ ಲಲಿತಾ ಸಹಸ್ರ ನಾಮಾವಳಿ ಓದಿ.

Trending videos

Back to Top