CONNECT WITH US  

ಜಾತಕ ಫ‌ಲ : ಜುಲೈ 25

   ಮಹದೇವಮ್ಮ ಗುಡಿಹಾಳ, ಹುಬ್ಬಳ್ಳಿ

  ನನ್ನ ಜಾತಕ ಕಳುಹಿಸಿಕೊಟ್ಟಿದ್ದೇನೆ. ಇತ್ತೀಚೆಗೆ ನಮ್ಮ ಮದುವೆಯಾಗಿ 50 ವರ್ಷಗಳು ಕಳೆದ ವಿಚಾರವಾಗಿ ನಡೆದ ದೇವಕಾರ್ಯ ಬಂಧು ಮಿತ್ರರ ಆಗಮನ ಊಟೋಪಚಾರಗಳ ಸಂದರ್ಭದಲ್ಲಿ ಆಪ್ತರೊಬ್ಬರು ವಜ್ರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ನಾನಿದನ್ನು ಧರಿಸಬಹುದೆ. ನನ್ನ ತುಲಾ ರಾಶಿಯಾಗಿರುವುದರಿಂದ ಉತ್ತಮ ಎಂದು ಹೇಳಿದರು, ದಯಮಾಡಿ ತಿಳಿಸಿ.

  ನಿಮ್ಮ ಬಂಧು ಮಿತ್ರರುಒಬ್ಬರ ನೀಡಿದ ವಜ್ರ ಅವರ ಪ್ರೀತಿಯ ಸಂಕೇತ. ಅದು ನಿಮ್ಮ ಬಗೆಗಿನ ಆದರ, ಭಕ್ತಿ, ಪ್ರೀತಿಯ ವಿಷಯ. ನಿಮ್ಮ ಜಾತಕವನ್ನು ಪರಿಶೀಲಿಸಿದ್ದೇನೆ. ಆದರೆ ನಿಮಗೆ ವಜ್ರ ಆಗಿ ಬರಲಾರದು. ತುಲಾ ರಾಶಿ ನಿಮ್ಮದು. ಹೌದಾದರೂ, ತುಲಾ ರಾಶಿಯ ಯಜಮಾನನಾದ ಶುಕ್ರನು ( ಗ್ರಹ) ನಿಮಗೆ ಉತ್ತಮನಲ್ಲ. ಇದರಿಂದ ಉತ್ತಮನಲ್ಲದವನ ಶಕ್ತಿಯನ್ನು ವೃದ್ಧಿಸುವ ವಜ್ರಧಾರಣೆ ಬೇಡ. ನವರತ್ನದ ಹರಳನ್ನು ಮನಸ್ಸಿಗೆ  ಬಂದಂತೆ ಧರಿಸಬಾರದು. ನೀವು ಬೆಳ್ಳಿಯಲ್ಲಿ ಕಿರುಬೆರಳಿಗೆ, ಬಲಗೈಗೆ 2 ಕ್ಯಾರೆಟ್‌ ಮುತ್ತನ್ನು ಧರಿಸಿ. ನಿಮ್ಮ ಲವಲವಿಕೆ, ಚೈತನ್ಯಗಳಿಗೆ ಇದು ಸಹಾಯ ಮಾಡುತ್ತದೆ. ಪ್ರತಿ ದಿನ ಚಂದ್ರಾಷ್ಟಕ, ಚಂದ್ರ ಮೌಳೇಶ್ವರ ಸ್ತೋತ್ರ ಓದುವುದರಿಂದಲೂ ಮುತ್ತಿಗೆ ಶಕ್ತಿ ಅಧಿಕ. 

  ಮೇಜರ್‌ ಶಾಂತಪ್ಪ, ಗೌರಿಬಿದನೂರು

  ನನ್ನ ಮತ್ತು ಪತ್ನಿಯ ಜಾತಕಗಳನ್ನು ಕಳಿಸಿದ್ದೇನೆ. ನಮ್ಮ ನಡುವೆ ವಿಶ್ವಾಸ, ಆದರಗಳಿವೆ. ಕೊರತೆ ಏನಿಲ್ಲ. ಆದರೆ ಸರ್‌ನೆ ಜಗಳ ಶುರುಗೊಳ್ಳುತ್ತದೆ. ಏಕೆ ಎಂದರೆ ಪ್ರೀತಿ ಎಂದೆನ್ನುತ್ತಾಳೆ. ಇದೇ ಆರೋಪವನ್ನು ಅವಳೂ ನನ್ನ ವಿರುದ್ಧ ಮಾಡುತ್ತಾಳೆ. ಜಗಳವಿರದೆಯೇ ಶಾಂತತೆ ನೆಲೆಸಲಾರದೆ? ಮಕ್ಕಳಿಗೂ ಮನಸ್ಸಿಗೆ ಬೇಸರ, ದುಗುಡಗಳೇಳುತ್ತವೆ. ಪರಿಹಾರವೇನು?
 ಮನುಷ್ಯ ಮನುಷ್ಯನ ನಡುವಣ ಹೊಂದಾಣಿಕೆ ಕಷ್ಟ. ಇದರಲ್ಲೂ ಹೆಣ್ಣು ಹಾಗೂ ಗಂಡುಗಳ ನಡುವಣ ಹೊಂದಾಣಿಕೆ ಇನ್ನೂ ಕಷ್ಟ. ಬಾಳ ಸಂಗಾತಿಯ ಜಾತಕದ ಹಲವಾರು ವಿಚಾರಗಳು ನಿಮ್ಮ ವೈಯುಕ್ತಿಕ ಜಾತಕಕ್ಕೆ ಕೂಡಿ ಬರುವ ಅಂಶವನ್ನು ಗಮನಿಸಿದಾಗ ನಿಮ್ಮಿಬ್ಬರ ನಡುವೆ ಕೆಲವು ಭಿನ್ನ. ವ್ಯತಿರಿಕ್ತ ಅಂಶಗಳು ಸ್ಪಷ್ಟ. ಆದರೆ ಹಲವು ಅಭಿಪ್ರಾಯ ಭೇದಗಳು ಬಂದಾಗ ಮಾತುಗಳನ್ನು ನಿಯಂತ್ರಿಸಿ. ಇಬ್ಬರ ಜಾತಕಗಳಲ್ಲೂ ಕೇತು ದೋಷ ಮಾತಿನ ಮೊನಚಿಗೆ ಅಹಂ ಅನ್ನು ಗೆಲ್ಲಲಾಗದು. ಕೇತು ಗ್ರಹ ಕವಚ ಸ್ತೋತ್ರವನ್ನು ನೀವು ಓದಿ. ನಿಮ್ಮ ಪತ್ನಿ ಕೇತು ಅಷ್ಟೋತ್ತರವನ್ನು ಓದಲಿ. 

  ಭವಾನಿ ಶಂಕರ ಪೈ, ಹೆಬ್ರಿ

 ನಮ್ಮ ಗದ್ದೆ ಹಾಗೂ ತೆಂಗಿನ ತೋಟಕ್ಕೆ ಸಂಬಂಧಿಸಿದಂತೆ ಅನಾವಶ್ಯಕವಾದ ವ್ಯಾಜ್ಯವೊಂದನ್ನು ಸ್ವಂತ ತಮ್ಮನೇ ನನ್ನ ವಿರುದ್ಧ ಜರುಗಿಸುತ್ತಿದ್ದಾನೆ. ನನ್ನ ಅಂತರಂಗದ ನೋವಿಗೆ ಕಾರಣನಾಗಿ ನಿದ್ದೆ ಇರದ ರಾತ್ರಿ ಕಳೆಯುತ್ತಿದ್ದೇನೆ. ಅನ್ಯಾಯವಾಗಿ ನನ್ನ ವಿರುದ್ಧವಾಗಿ ನಡೆಯುತ್ತಿರುವ ಈ ವ್ಯಾಜ್ಯದಲ್ಲಿ ನನಗೆ ಪರಿಹಾರವಿದೆಯೇ?

 ನಿಮ್ಮ ಜಾತಕದಲ್ಲಿ ಸಂಪನ್ನನಾದ ಪಂಚಮಾಧಿಪತಿಯು (ಇವನು ಸುವ್ಯವಸ್ಥಿತ ಸ್ಥಿತಿಯಲ್ಲಿದ್ದರೆ ಜಂಜಡಗಳ ನಡುವಣ ನಿರಂತರ ಕಿರಿಕಿರಿಗಳು ಬರಲಾರದು) ದುಷ್ಟನ ಜೊತೆಗಿದ್ದು ಯಾತನೆಗೆ ಕಾರಣಗಳಾಗಿವೆ. ಆದರೆ ನಿರಾಶರಾಗಬೇಡಿ. ಅಂತಿಮ ಹಂತದಲ್ಲಿನ ಲಾಭಕ್ಕೆ ಪಂಚಮಾಧಿಪತಿಗೆ ದುಷ್ಟನಿಂದ ಸಹಾಯ ಸಿಗಲಿರುವುದರಿಂದ ಲಾಭಕ್ಕೆ ಹೊರಳಿಕೊಳ್ಳುವ ವರ್ತಮಾನ ಸೃಷ್ಟಿಯಾಗುತ್ತದೆ.  

Trending videos

Back to Top