CONNECT WITH US  

ಜಾತಕ ಫ‌ಲ : ಅಗಸ್ಟ್‌ 15

  ರೋಹಿಣಿ ದಾಟಿಮನೆ, ಮಂಗಳೂರು

  ಸ್ವಾಮಿ ನಮ್ಮ ಮನೆಯವರ ಮತ್ತು ನನ್ನ ಜಾತಕಗಳನ್ನು ಕಳಿಸಿರುತ್ತೇನೆ. ಒಂದಲ್ಲಾ ಒಂದು ತಾಕಲಾಟಗಳು. ಮದುವೆಯಾಗಿ ಮೂರು ವರ್ಷಗಳು. ಒಂದೂವರೆ ವರ್ಷದ ಹಿಂದೆ ಗರ್ಭಿಣಿಯಾಗಿದ್ದೆ. ಗರ್ಭಸ್ರಾವವಾಯ್ತು. ಮತ್ತೆ ಈ ನಿಟ್ಟಿನಲ್ಲಿ ಬೆಳವಣಿಗೆ ಏನಿಲ್ಲ. ಅಮೇರಿಕಾದಲ್ಲಿದ್ದ ಪತಿ ಭಾರತಕ್ಕೆ ವಾಪಸು ಬಂದರು. ನನಗೀಗ ಅಮೇರಿಕಾದಲ್ಲಿ ಕೆಲಸ ಸಿಕ್ಕಿದೆ. ನಾನು ವಾಹನ ಅಪಘಾತ ಒಂದರಲ್ಲಿ ಚಿಕ್ಕಪುಟ್ಟ ಗಾಯಗಳನ್ನೂ ಮಾಡಿಕೊಂಡಿದ್ದೇನೆ. ಕೆಲಸ ಸ್ವೀಕರಿಸಲೇ? ತಿರುಗಿ ಅಲ್ಲಿಗೆ ಬಂದರೆ ನನ್ನ ಪತಿಗೆ ಕೆಲಸ ಸಿಗಬಹುದೆ? ಎಲ್ಲಾ ಗೊಂದಲವಾಗಿದೆ. ಯಾವ ದೋಷಗಳಿಂದ ಮನಃಶಾಂತಿ ನಾಶವಾಗಿದೆಯೆ?

     ಬಿಕ್ಕಟ್ಟಿನ ಬಿಕ್ಕಳಿಕೆಗಳು ನಿಮ್ಮ ಮತ್ತು ಪತಿ, ಹೀಗೆ ಇಬ್ಬರ ಜಾತಕಗಳಲ್ಲೂ ಶನಿಕಾಟ (ಸಾಡೇಸಾತಿ) ದಿಂದಾಗಿ ಉಲ್ಬಣಗೊಂಡಿವೆ. ಈಗ ಮೂರು ವರ್ಷಗಳಿಂದ (ತುಸುಜಾಸ್ತಿ ಎನ್ನಿ) ನಿಮ್ಮಿಬ್ಬರಿಗೂ ಶನಿಕಾಟವಿರುವುದು ನಿಮ್ಮ ಜಾತಕದ ರಾಹು ದಶಾಕ್ಕೆ, ನಿಮ್ಮ ಪತಿಯ ಜಾತಕದ ಬುಧ ದಶಾಕ್ಕೆ ಮೇಲೇರುವ ದಾರಿಯ ಏಣಿಯನ್ನು ಅಸ್ತವ್ಯಸ್ತಗೊಳಿಸಲು ಸುಲಭವಾಗಿದೆ. ಮಗುವಿನ ಆಗಮನ ಇದ್ದೇ ಇದೆ. ಮಗು ಜನಿಸಿದ ಮೇಲೂ ಮಗು (ಇಬ್ಬರು ಮಕ್ಕಳಾಗಬಹುದು) ದಿನ ಆರೈಕೆ ಇರಲಿ. ಶ್ಯಾಮಲೋಷ್ಟೋತ್ತರ ಸ್ತೋತ್ರ ಪಠಿಸಿ. ನೀವು 2 ಕ್ಯಾರಟ್‌ ಗೋಮೇಧಕ ಧರಿಸಬೇಕು. ಕೆಲಸಕ್ಕಾಗಿ ಈಗ ನಿರಾಕರಣೆ ಬೇಡ. ಪತಿ ಸದ್ಯ ಭಾರತದಲ್ಲಿಯೇ ಕೆಲಸ ಹುಡುಕಲಿ. ಸೌರ ಪಂಚಾಕ್ಷರಿ ಜಪವನ್ನು ಮನೆಯವರು ಮಾಡಲಿ. ನೀವು ಮಹಿ ಮಣಿ ಐಂದ್ರಿತಾ ಸ್ತೋತ್ರ. ಸಂತಾನ ಗೋಪಾಲಕೃಷ್ಣ ಸ್ತುತಿ  ಮಂತ್ರ ಜಪಿಸಿ. ಅಮೇರಿಕಾದಲ್ಲಿ ನೀವಿಬ್ಬರೂ ಕೆಲಸ ಮಾಡುವ ದಿನಗಳೇ ಆಗಲಿ. ಇನ್ನಿಷ್ಟು ನೆಮ್ಮದಿಯ ಬಗೆಗಿನ ಅನ್ಯ ಬೆಳವಣಿಗೆಗಳು ಸಾಧ್ಯವಾಗುತ್ತವೆ. 

  ಲಕ್ಷ್ಮಣಪ್ಪ, ಸವದತ್ತಿ

 ಪ್ರತಿ ದಿನವೂ ಗುರೂಜಿ ಕನಸಿನಲ್ಲಿ ಬಂದು ದೇವತೆಯೊಬ್ಬಳು ಕಾಣಿಸಿಕೊಳ್ಳುತ್ತಾಳೆ. ಭಕ್ತಿ ಭಾವದ ಮೂರ್ತಿಯಾಗಿ ಅಂದವಿರುವ ಮಹಾತಾಯಿಯಾಗಿ ಕಾಣಿಸಿಕೊಂಡವಳು, ನಾಗರ ಮುಖದಲ್ಲಿ ಭಾವದಲ್ಲಿ ಹೆಡೆ ಅರಳಿಸಿ, ನಾನು ನಿನ್ನ ಮನೆತನ ಕಾಪಾಡುವ ನಾಗದೇವತೆ ಎಂದು ಹೇಳುತ್ತಾ ಅಳುತ್ತಾಳೆ. ಬಂಧನದಲ್ಲಿದ್ದೇನೆ ಬಿಡಿಸುವ ಕಾಯಕ ನಡೆಸು ಎನ್ನುತ್ತಾಳೆ. ಎಚ್ಚರವಾಗುತ್ತದೆ. ಹುಣ್ಣಿಮೆಗೆ ಆಚೆ ಈಚೆಯ ದಿನಗಳಲ್ಲಿ ಇದು ಸ್ಪಷ್ಟ. ಏನು ಮಾಡುವುದು? ಏನೋ ಅಪರಾಧಿ ಮನೋಭವಾ. ಪರಿಹಾರ ಇದೆಯೇ?

  ಬಹಳ ಮಹತ್ವವಾದ ಪ್ರಶ್ನೆ ಇದು. ದೈವ ಮಂತ್ರಗಳ ವಶ, ಮಂತ್ರ ಸಜ್ಜನರ ಕೈವಶ, ಆಸೆಬುರುಕರು ಹವನ, ಯಾವ ಎಂದು ಶೋಷಣೆ ಮಾಡುವವರು ಇದ್ದೇ ಇದ್ದಾರೆ. ಎಚ್ಚರ. ಎಲ್ಲರನ್ನೂ ನಂಬಬೇಡಿ. ನಂಬಿಗೆ ಬರುವ, ಬಾರದಿರುವ ದಿವ್ಯದ ವಿಚಾರವನ್ನು ನೀವು ನಿರ್ಧರಸಬೇಕು. ನೀಲ ಸಾರಸ್ವತ ತಂತ್ರಶಾಸ್ತ್ರ ಅಭ್ಯಾಸ ಮಾಡಿದ ಶಕ್ತಿ ಸಾಧಕರಾಗಿ, ಸಾತ್ವಿಕತೆ ಉಳ್ಲವರಾಗಿ ಇರುವ ಗುರು ಚೈತನ್ಯ ಆರಾಧಕರ ಬಳಿ ಘೋರರೂಪಳಾದ, ಚಂಡ ರೂಪಳಾದ ದೇವಿ ಸೌಮ್ಯ ಸ್ವರೂಪಳಾಗುವ ಪರಿವರ್ತನೆಗೆ ಅವಕಾಶ ಒದಗಿಸಿಕೊಳ್ಳಿ. ಯಾರದೋ ಸೊತ್ತಾಗಿರುವ (ಬಂಧನದಿಂದ) ದೇವಿ ನಿಮ್ಮ ಪೂಜೆ, ಸ್ತುತಿ, ಆರಾಧನೆಗಳಿಗೆ ಸಿಗುವ ಅವಕಾಶವಾಗುತ್ತದೆ. ಭುವನೇಶ್ವರಿಯ ಸ್ವರೂಪದ ಈ ಮಹಾತಾಯಿ ನಿಮ್ಮ ಕುಟುಂಬದ ರಕ್ಷಣೆಗೆ ಮಾತ್ರವಲ್ಲದೆ, ಸಕಲರ ದಿವ್ಯಕ್ಕೆ, ನಿಮ್ಮ ಅಂತರಂಗ ಮಿತ್ರ, ಇಷ್ಟ ಬಂಧುಗಳಿಗೆ  ನೆರವಾಗುತ್ತಾರೆ. 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top