CONNECT WITH US  

ಮಟನ್‌ ಮಸಾಲಾ

ಬೇಕಾಗಿರುವ ಸಾಮಾಗ್ರಿಗಳು :ಮಟನ್‌ - 1/2 ಕೆ.ಜಿ., ಉದ್ದನೆಯ ಕೆಂಪು ಮೆಣಸಿನಕಾಯಿ - 2, ಸಣ್ಣ ಕೆಂಪು ಮೆಣಸಿನಕಾಯಿ - 7, ಕಾಳು ಮೆಣಸು - 7, ದಾಲಿcನ್ನಿ - 1 ಚಕ್ಕೆ, ಲವಂಗ - 3, ಕೊತ್ತಂಬರಿ ಬೀಜಗಳು - 3 ಟೀ ಚಮಚ, ಜೀರಿಗೆ ಕಾಳುಗಳು -1/4 ಟೀ ಚಮಚ, ಗಸಗಸೆ ಬೀಜ - 1/4 ಟೀ ಚಮಚ, ಬೆಳ್ಳುಳ್ಳಿ - 9 ಸೊಳೆಗಳು, ನೀರುಳ್ಳಿ - 2, ಕೊತ್ತಂಬರಿ ಸೊಪ್ಪು - 2 ಟೇಬಲ್‌ ಚಮಚ, ಹಸಿ ಮೆಣಸಿನಕಾಯಿ -3, ಶುಂಠಿ - 1/2 ಇಂಚು, ಟೊಮ್ಯಾಟೋ - 2, ಹುಣಸೆ ಹುಳಿ - ಸಣ್ಣ ತುಂಡು, ಅರಶಿನ ಹುಡಿ - 1/4 ಟೀ ಚಮಚ, ತಾಜಾ ತೆಂಗಿನ ತುರಿ - 1/2 ಕಾಯಿ, ತುಪ್ಪ - 2 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ 
ಮಟನ್‌ ತುಂಡುಗಳನ್ನು ಬೇಕಾದ ಹದಕ್ಕೆ ಕತ್ತರಿಸಿ ಸ್ವತ್ಛಗೊಳಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕಿ.

ನೀರುಳ್ಳಿ, ಶುಂಠಿ, ಹಸಿ ಮೆಣಸು, ಟೊಮ್ಯಾಟೋಗಳ ಸಿಪ್ಪೆ ಸುಲಿದು ಚೆನ್ನಾಗಿ ತೊಳೆಯಿರಿ.
ಕುಕ್ಕರಲ್ಲಿ ತುಪ್ಪವನ್ನು 2 ನಿಮಿಷಗಳವರೆಗೆ ಬಿಸಿ ಮಾಡಿಕೊಂಡು ಅದರಲ್ಲಿ ನೀರುಳ್ಳಿಯನ್ನು ಗಾಢ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ನಂತರದಲ್ಲಿ ಇದಕ್ಕೆ ಮಟನ್‌ ತುಂಡುಗಳು, ಕತ್ತರಿಸಿದ   ತರಕಾರಿಗಳು, ಉಪ್ಪನ್ನು ಹಾಕಿ 5 ನಿಮಿಷಳವರೆಗೆ ಅಲ್ಲಾಡಿಸುತ್ತಾ ಫ್ರೈ ಮಾಡಿ. ಕುಕ್ಕರಿನ ಮುಚ್ಚಳವನ್ನು ಹಾಕಿ. ಹೆಚ್ಚಿನ ಉರಿಯಲ್ಲಿ ಬೇಯಿಸಿ,  ಬಳಿಕ ಹದ ಉರಿಯಲ್ಲಿ 12 ನಿಮಿಷಗಳವರೆಗೆ ಬಿಟ್ಟುಬಿಡಿ. ಕುಕ್ಕರನ್ನು ತಣ್ಣಗಾಗಲು ಬಿಡಿ.
ಒಂದು ಪಾತ್ರೆಯಲ್ಲಿ 1 ಟೇಬಲ್‌ ಚಮಚ ತುಪ್ಪವನ್ನು 1/2 ನಿಮಿಷಗಳವರೆಗೆ ಬಿಸಿಮಾಡಿಕೊಂಡು, ಕೊತ್ತಂಬರಿ ಬೀಜಗಳು, ಮೆಣಸಿನಕಾಯಿ, ಜೀರಿಗೆ ಕಾಳುಗಳು, ಕಾಳು ಮೆಣಸು, ದಾಲಿcನ್ನಿ, ಲವಂಗ, ಗಸಗಸೆ ಬೀಜಗಳು, ಮೆಂತ್ಯೆ ಕಾಳುಗಳನ್ನು ಕರಿದುಕೊಳ್ಳಿ. ಇದನ್ನು ತೆಗೆದಿರಿಸಿ ಬಳಿಕ ಇನ್ನು ಸ್ವಲ್ಪ ತುಪ್ಪವನ್ನು ಹಾಕಿ ನೀರುಳ್ಳಿ, ಬೆಳ್ಳುಳ್ಳಿಗಳನ್ನು ಫ್ರೈ ಮಾಡಿಕೊಳ್ಳಿ. ಈ ಮೇಲಿನ ಮಸಾಲೆಗಳನ್ನು ಬೇಕಾದಷ್ಟು ನೀರನ್ನು ಬೆರೆಸಿ ಪೇಸ್ಟ್‌ ರೂಪಕ್ಕೆ ಅರೆಯಿರಿ. ಈಗ ಕುಕ್ಕರನ್ನು ತೆರೆದು ಅದಕ್ಕೆ ಮಸಾಲೆ ಪೇಸ್ಟ್‌ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಮತ್ತು ಆ ಬಳಿಕ ತೆಂಗಿನ ತುರಿಯನ್ನು ಹಾಕಿ ಒಂದು ಕುದಿ ಬರಿಸಿ, ಹೀಗೆ ಮಾಡುವಾಗ ಆಗಾಗ ಅಲ್ಲಾಡಿಸುತ್ತಿರಿ. ನಂತರ ಉರಿಯನ್ನು ಕಡಿಮೆ ಮಾಡಿಕೊಂಡು ಸಿಮ್‌ನಲ್ಲಿ ಕೆಲ ನಿಮಿಷಗಳವರೆಗೆ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್‌ ಮಾಡಿಕೊಳ್ಳಿ.

Trending videos

Back to Top