CONNECT WITH US  

ಕ್ರಾಬ್‌ ವೈಟ್‌ ಸಾಸ್‌

ಬೇಕಾಗಿರುವ ಸಾಮಾಗ್ರಿಗಳು :ಏಡಿ - 5, ವೈಟ್‌ ಸಾಸ್‌ - 2 ಟೇಬಲ್‌ ಚಮಚ, ನೀರುಳ್ಳಿ - 2, ಕತ್ತರಿಸಿದ ಬೆಳ್ಳುಳ್ಳಿ - 3 ಸೊಳೆಗಳು, ಹಸಿ ಮೆಣಸಿನಕಾಯಿ - 2, ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಟೇಬಲ್‌ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಬೆಣ್ಣೆ - 1/2 ಟೀ ಚಮಚ.

ತಯಾರಿಸುವ ವಿಧಾನ : ಸಿದಗೊಳಿಸಿರುವ ಏಡಿಗಳನ್ನು ಸ್ವತ್ಛಗೊಳಿಸಿ ಚೆನ್ನಾಗಿ ತೊಳೆಯಿರಿ. ಕೊಂಡಿಗಳನ್ನು ಬೇರಿಮಾಡಿ, ಅವುಗಳನ್ನು ಜಜ್ಜಿರಿ, ಪ್ರತೀ ಒಂದನ್ನು ಎರಡೆರಡು ತುಂಡುಗಳಾಗಿ ಕತ್ತರಿಸಿ.

ಬೆಣ್ಣೆಯನ್ನು ಬಿಸಿಮಾಡಿ ಮತ್ತದರಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸನ್ನು ಫ್ತೈ ಮಾಡಿ.
ಇದಕ್ಕೆ ಏಡಿಯನ್ನು ಸೇರಿಸಿ ಉಪ್ಪು ಹಾಕಿ ಬೇಯಿಸಿ.

ಈಗ ವೈಟ್‌ ಸಾಸ್‌ ಸೇರಿಸಿ, ಹದವಾದ ಉರಿಯಲ್ಲಿ ಬೇಯಿಸಿ, ಮತ್ತದಕ್ಕೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ.

Trending videos

Back to Top