CONNECT WITH US  

ಸಿಲ್ವರ್‌ ಫಿಶ್‌ ಗ್ರೇವಿ

ಬೇಕಾಗಿರುವ ಸಾಮಾಗ್ರಿಗಳು : ಸಿಲ್ವರ್‌ ಫಿಶ್‌ - 25, ಉದ್ದನೆಯ ಕೆಂಪು ಮೆಣಸಿನಕಾಯಿಗಳು - 3, ಸಣ್ಣ ಕೆಂಪು ಮೆಣಸಿನಕಾಯಿ - 5, ತುರಿದ ತೆಂಗಿನಕಾಯಿ - 3/4 ಗೆರಟೆ, ಕೊತ್ತಂಬರಿ ಬೀಜಗಳು - 1 ಟೇಬಲ್‌ ಚಮಚ, ಮೆಂತ್ಯೆ ಕಾಳುಗಳು - 1/4 ಟೀ ಚಮಚ, ಹುಣಸೆ ಹುಳಿ - ಸಣ್ಣ ಮಾರ್ಬಲ್‌ ಗಾತ್ರದ್ದು, ಅರಶಿನ ಹುಡಿ - 1/4 ಟೀ ಚಮಚ, ಬೆಳ್ಳುಳ್ಳಿ - 5 ಸೊಳೆಗಳು, ನೀರುಳ್ಳಿ - 1 1/2, ಹದವಾಗಿ ಕತ್ತರಿಸಿದ ಹಸಿ ಮೆಣಸು - 2, ಹದವಾಗಿ ಕತ್ತರಿಸಿದ ಶುಂಠಿ - 1/2 ಇಂಚು, ರುಚಿಗೆ ಬೇಕಾಗಿರುವಷ್ಟು ಉಪ್ಪು, ತೆಂಗಿನ ಎಣ್ಣೆ - 2 ಟೇಬಲ್‌ ಚಮಚ.

ತಯಾರಿಸುವ ವಿಧಾನ :ಮೆಣಸು, ಕೊತ್ತಂಬರಿ ಬೀಜ, ಮತ್ತು ಮೆಂತ್ಯೆ ಕಾಳುಗಳನ್ನು  ಫ್ರೈ ಮಾಡಿಕೊಳ್ಳಿ. ಈ ರೀತಿಯಾಗಿ ಹುರಿದು ರೋಸ್ಟ್‌ ಮಾಡಿಕೊಂಡ ಮಸಾಲೆಯನ್ನು ತೆಂಗಿನ ತುರಿ, ಅರಶಿನ ಹುಡಿ, ಹುಣಸೆ ಹುಳಿ, ಬೆಳ್ಳುಳ್ಳಿ, 1/2 ನೀರುಳ್ಳಿ ಇವೆಲ್ಲವನ್ನೂ ಜೊತೆಯಾಗಿ ಅರೆದು ಪೇಸ್ಟ್‌ ರೂಪದಲ್ಲಿ ಸಿದ್ಧಪಡಿಸಿ ತೆಗೆದಿರಿಸಿ. ಮೀನನ್ನು ಸರಿಯಾಗಿ ಸ್ವತ್ಛಗೊಳಿಸಿ.
ಮಣ್ಣಿನ ಮಡಕೆಯೊಂದನ್ನು ತೆಗೆದುಕೊಂಡು ಅದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ ನೀರುಳ್ಳಿಯನ್ನು ಹಳದಿ ಬಣ್ಣ ಬರುವವರೆಗೆ ಫ್ರೈ ಮಾಡಿ. ಇದೀಗ ಸಿದ್ಧಪಡಿಸಿಟ್ಟುಕೊಂಡಿರುವ ಮಸಾಲೆ ಪೇಸ್ಟನ್ನು ಬೆರೆಸಿ ಮತ್ತು ಹಸಿ ಮೆಣಸಿನಕಾಯಿ, ಶುಂಠಿ, ಉಪ್ಪು ಹಾಗೂ ನೀರನ್ನು ಸೇರಿಸಿ. ಒಂದು ಕುದಿಗೆ ಕಾಯಿಸಿ, ಆಗಾಗ ಕಲಸುತ್ತಿರಿ, ಇದೀಗ ಉರಿಯನ್ನು ಕಡಿಮೆಗೊಳಿಸಿ ಸಿದ್ಧಪಡಿಸಿಟ್ಟುಕೊಂಡಿರುವ ಮೀನನ್ನು ಹಾಕಿ ಹದವಾದ ಉರಿಯಲ್ಲಿ 5-7 ನಿಮಿಷಗಳವರೆಗೆ ಬೇಯಿಸಿ.

ಪರಿವರ್ತನೆ : ಸಿಲ್ವರ್‌ ಫಿಶ್‌ ಬದಲಿಗೆ ಬೇರಿನ್ಯಾವುದೇ ಮೀನನ್ನು ಬಳಸಬಹುದಾಗಿರುತ್ತದೆ.

Trending videos

Back to Top