CONNECT WITH US  

ಕಾರ್ನ್ ಫ್ಲೇಕ್ ಚಿಕನ್

ಏನೇನು  ಬೇಕು?: ಬೋನ್‌ಲೆಸ್‌ ಚಿಕನ್‌ 1/4 ಕೆ.ಜಿ, ಅರಿಶಿನ 1 ಚಮಚ, ಮೊಸರು 2 ಸ್ಪೂನ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1 ಚಮಚ, ತಂದೂರಿ ಚಿಕನ್‌ ಮಸಾಲ 1 ಚಮಚ, ಕಾಳು ಮೆಣಸಿನ ಪುಡಿ 1 ಚಮಚ, ಧನಿಯಾ ಪುಡಿ 1 ಚಮಚ, ಕಾರ್ನ್ಫ್ಲೆಕ್ಸ್‌ 1 ಚಮಚ, ಕಾರ್ನ್ಫ್ಲೋರ್‌ 1 ಬೌಲ್‌, ಮೊಟ್ಟೆ 1, ಉಪ್ಪು, ಎಣ್ಣೆ 200 ಎಂ.ಎಲ್‌ .

ಮಾಡೋದ್ಹೆಂಗೆ?: 
1.ಚಿಕನ್‌ ಪೀಸ್‌, ಅರಿಶಿನ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ತಂದೂರಿ ಚಿಕನ್‌ ಮಸಾಲ, ಕಾಳು ಮೆಣಸಿನ ಪುಡಿ, ಧನಿಯಾ ಪುಡಿ, ಉಪ್ಪು, ಕಾರ್ನ್ಫ್ಲೋರ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. 

2.ರ ಕಾರ್ನ್ಫ್ಲೆಕ್ಸ್‌ನ° ಚೆನ್ನಾಗಿ ಪುಡಿ ಮಾಡಿ. 

3. ಮೊಟ್ಟೆ ಒಡೆದು ಕಪ್‌ನಲ್ಲಿ ಹಾಕಿ.

4.ಇದರಲ್ಲಿ ಚಿಕನ್‌ ಅದ್ದಿ.

5. ಮತ್ತೆ ಕಾನ್‌ಫ್ಲೆಕ್ಸ್‌ ಮಿಶ್ರಣದಲ್ಲಿ ಹೊರಳಿಸಿ. (ಕಾರ್ನ್ಫ್ಲೆಕ್ಸ್‌ ಅಂಟಿಕೊಳ್ಳಲು ಬಿಡಿ)

6.ಕಾದ ಎಣ್ಣೆಯಲ್ಲಿ ಹಾಕಿ. 

7.ಡೀಪ್‌ ಫ್ರೈ ಮಾಡಿ. 

8. ಬಿಸಿ ಬಿಸಿ ಕಾರ್ನ್ಫ್ಲೇಕ್‌ ಚಿಕನ್‌ನ ಬಾಯಿಗಿಟ್ಕೊಳ್ಳಿ. ವಾವ್‌, ಏನ್‌ ರುಚಿ ಅಲ್ವಾ?

- ಸುಚಿತ್ರಾ (ಒಗ್ಗರಣೆ ಡಬ್ಬಿ)

Trending videos

Back to Top