CONNECT WITH US  

ಚಿಕನ್‌ ಗ್ರೀನ್‌ ಮಸಾಲಾ

ಬೇಕಾಗಿರುವ ಸಾಮಾಗ್ರಿಗಳು : ಚಿಕನ್‌ - 1ಕೆ.ಜಿ., ತಾಜಾ ಕೊತ್ತಂಬರಿ ಸೊಪ್ಪು - 1ಕಟ್ಟು, ಹಸಿ ಮೆಣಸಿನಕಾಯಿ - 7, ಶುಂಠಿ - 1 1/2 ಇಂಚು, ಬೆಳ್ಳುಳ್ಳಿ - 9 ಸೊಳೆಗಳು, ನೀರುಳ್ಳಿ - 3, ಲವಂಗ - 3.ದಾಲಿcನ್ನಿ ಚಕ್ಕೆ - 2 ಇಂಚು ಗಾತ್ರದ್ದು, ಕಾಳು ಮೆಣಸು - 7, ಅರಶಿನ ಹುಡಿ - 1/4 ಟೀ ಚಮಚ, ಟೊಮ್ಯಾಟೋ - 3, ಗಸಗಸೆ - 2 ಟೀ ಚಮಚ, ಜೀರಿಗೆ ಕಾಳು - 1/2 ಟೀ ಚಮಚ, ತುಪ್ಪ - 1 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ 
ಟೊಮ್ಯಾಟೋ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾನುಗಳನ್ನು ಹದವಾದ ಪೇಸ್ಟ್‌ ರೂಪಕ್ಕೆ ಅರೆದುಕೊಳ್ಳಿ. ಚಿಕನ್‌ ಅನ್ನು ಚೆನ್ನಾಗಿ ಸ್ವತ್ಛಗೊಳಿಸಿ ಹೆಚ್ಚಿನ ನೀರನ್ನು ಸರಿಯಾಗಿ ಆರಿಸಿ.

ತುಪ್ಪವನ್ನು ಬಿಸಿಮಾಡಿ, ಕತ್ತರಿಸಿದ ನೀರುಳ್ಳಿ 1, ಟೊಮ್ಯಾಟೋ ಮತ್ತು ಚಿಕನ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಅರೆದಿಟ್ಟುಕೊಂಡಿರುವ ಮಸಾಲೆಯನ್ನು ಬೆರೆಸಿ ಬಳಿಕ ಗ್ರೇವಿ ದಪ್ಪಗಾಗುವ ತನಕ ಚೆನ್ನಾಗಿ ಬೇಯಿಸಿ.

Trending videos

Back to Top