CONNECT WITH US  

ವಿದ್ಯುತ್‌ ಶಾರ್ಟ್‌ಸರ್ಕ್ನೂಟ್‌: ಗೇರು, ರಬ್ಬರ್‌ ತೋಟ ಭಸ್ಮ

ಪುತ್ತೂರು: ಕೃಷಿಕ ಸಮಾಜಕ್ಕೆ ಸಮಸ್ಯೆಗಳು ಒಂದರ ಹಿಂದೆ ಮತ್ತೂಂದರಂತೆ ಬಂದೆರಗುತ್ತಿವೆೆ. ಮಳೆಗಾಲದಲ್ಲಿ ರೋಗ, ಇಳುವರಿ ಕೊರತೆ, ಬೆಲೆ ಇಳಿಕೆ ಹೀಗೆ ವರ್ಷಪೂರ್ತಿ ರೈತರ ಕಷ್ಟಗಳಿಗೆ ಕೊನೆಯಿಲ್ಲ.

ದಿನೇ-ದಿನೇ ಹೆಚ್ಚಳ

ಕಳೆದ ಕೆಲ ದಿನಗಳಲ್ಲಿ ಗೇರು ಹಾಗೂ ರಬ್ಬರ್‌ ತೋಟಗಳು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಹಾಗೂ ತಂತಿಯಿಂದ ಹಬ್ಬುವ ಬೆಂಕಿಯ ಕಿಡಿ ಇಡೀ ಪರಿಸರವನ್ನೆ ಸುಡುತ್ತಿದೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವು ಗ್ರಾಮಗಳಲ್ಲಿ  ಇಂತಹ ಘಟನೆ ನಡೆದಿದ್ದು, ಕೃಷಿಕರಿಗೆ ಹೊಸ ಸಮಸ್ಯೆ ಎದುರಾಗಿದೆ. ಇದು ಬೆಂಕಿ ಆಕಸ್ಮಿಕ ಎಂದು ಹೇಳಿಕೆ ನೀಡಿದರೆ ಅದರಿಂದ ಬಲಿಪಶುವಾಗುವುದು ರೈತನೇ. ತಾನು ವರ್ಷಪೂರ್ತಿ ಸಾಕಿ, ಇಳುವರಿ ಕೊಡುವ ಹಂತಕ್ಕೆ ಬಂದಿರುವ ರಬ್ಬರ್‌, ಗೇರು ತೋಟ ಕಣ್ಣೆದುರೇ ಬೆಂಕಿಗೆ ಆಹುತಿಯಾಗುವ ಪರಿಸ್ಥಿತಿ ಎದುರಾಗುವುದು ವಿಷಾದನೀಯ.

ಮೆಸ್ಕಾಂ ಹೊಣೆ ಹೊರಬೇಕು

ವಿದ್ಯುತ್‌ ತಂತಿ ಅಥವಾ ಟ್ರಾನ್ಸ್‌ ಫಾರ್ಮರ್‌ಗಳಿಂದ ಕೃಷಿ ತೋಟ ಬೆಂಕಿಗೆ ಆಹುತಿಯಾದರೆ ಅದಕ್ಕೆ ಮೆಸ್ಕಾಂ ಹೊಣೆ ಹೊರಬೇಕು. ಯಾಕೆಂದರೆ ಶಾರ್ಟ್‌ಸರ್ಕ್ನೂಟ್‌ನಿಂದಾಗಿ ಇಂತಹ ಘಟನೆಗಳು ನಡೆಯುವ ಕಾರಣ ಮೆಸ್ಕಾಂ ಇದರ ಜವಬ್ದಾರಿ ಹೊರಬೇಕು. ಲಕ್ಷಾಂತರ ರೂ. ಹಣ ವ್ಯಯಿಸಿ ಬೆಳೆದ ಕೃಷಿ ಭೂಮಿ ನಾಶವಾದಾಗ ಸರಕಾರ ಒಂದೆರೆಡು ಸಾವಿರ ಕೊಟ್ಟು ಕೈ ತೊಳೆದು ಬಿಟ್ಟರೆ ಇದರಿಂದ ಕೃಷಿಕನಿಗೆ ನ್ಯಾಯ ದೊರಕುವುದಿಲ್ಲ. ವಿದ್ಯುತ್‌ ಕಂಬಗಳಿಂದ ತಗಲುವ ಬೆಂಕಿಯಿಂದ ಉಂಟಾಗುವ ನಷ್ಟಕ್ಕೆ ಸಂಬಂಧಪಟ್ಟ ಮೆಸ್ಕಾಂ ಹೊಣೆ ಹೊರಬೇಕು.ಯಾಕೆಂದರೆ ಸುರಕ್ಷಾ ಕ್ರಮ ಅಳವಡಿಸಿದ ಕಾರಣವೇ ಬೆಂಕಿ ತಗಲು ಕಾರಣ ಎನ್ನುವುದರಲ್ಲಿ ಅನುಮಾನ ಇಲ್ಲ.

ನ್ಯಾಯಯುತ ಪರಿಹಾರ ನೀಡಿ

ರಬ್ಬರ್‌ ತೋಟ ಅಥವಾ ಕೃಷಿ ತೋಟಗಳಿಗೆ ಬೆಂಕಿ ತಗಲಿದರೆ ಅದಕ್ಕೆ ಬಿಡಿಗಾಸು ಪರಿಹಾರ ನೀಡುವ ಬದಲು ಈಗಿನ ಮಾರುಕಟ್ಟೆ ಧಾರಣೆ ಹಾಗೂ ಭವಿಷ್ಯತ್ತಿನಲ್ಲಿ ಅದರಿಂದ ಪಡೆಯಬಹುದಾದ ಇಳುವರಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪರಿಹಾರ ನೀಡಬೇಕು. ಐದಾರು ವರ್ಷ ಸಾಕಿದ ರಬ್ಬರ್‌ ಗಿಡಗಳು ಫಸಲು ಬರುವ ಮುನ್ನ ಅಗ್ನಿ ಆಕಸ್ಮಿಕಕ್ಕೆ ಆಹುತಿಯಾದರೆ ಅದಕ್ಕೆ ಕೃಷಿಕ ಹೊಣೆಯಲ್ಲ. ಬದಲಾಗಿ ಬೆಂಕಿಯ ಮೂಲವೇ ಹೊಣೆ ಹೊರಬೇಕು.

Trending videos

Back to Top