CONNECT WITH US  

ಕಾರ್ನಾಡ್‌ ವಿರಚಿತ ನಾಟಕ ಪ್ರದರ್ಶನ ರದ್ದು

ಉಡುಪಿ: ಭಕ್ತರ ವಿರೋಧದ ಹಿನ್ನೆಲೆಯಲ್ಲಿ ಮಣಿಪಾಲ ಸಮೀಪದ ನರಸಿಂಗೆ ದೇವಸ್ಥಾನದಲ್ಲಿ ಗುರುವಾರ ಪ್ರದರ್ಶನಗೊಳ್ಳಬೇಕಿದ್ದ ಗಿರೀಶ್‌ ಕಾರ್ನಾಡ್‌ ವಿರಚಿತ "ನಾಗಮಂಡಲ' ನಾಟಕ ಪ್ರದರ್ಶನ ರದ್ದುಗೊಂಡಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ "ನಾಗಮಂಡಲ' ನಾಟಕ ಗುರುವಾರ ಪ್ರದರ್ಶನಗೊಳ್ಳಬೇಕಿತ್ತು. ಆದರೆ, "ಗೋಮಾಂಸ ಭಕ್ಷಣೆ ಕುರಿತಂತೆ ಕಾರ್ನಾಡರ ನಡವಳಿಕೆ ಸಭ್ಯವಾದದ್ದಲ್ಲ. ಇಂತಹವರ ನಾಟಕವನ್ನು ದೇವಸ್ಥಾನದಲ್ಲಿ ಪ್ರದರ್ಶಿಸುವುದು ಬೇಡ' ಎಂದು ಕೆಲವು ಭಕ್ತರು ಆಕ್ಷೇಪಿಸಿದರು. ಈ ಹಿನ್ನೆಲೆಯಲ್ಲಿ ಅವರ "ನಾಗಮಂಡಲ' ನಾಟಕ ರದ್ದು ಪಡಿಸಿ, ಬೇರೆ ನಾಟಕ ಪ್ರದರ್ಶಿಸಲಾಯಿತು.


Trending videos

Back to Top