CONNECT WITH US  

ಹೆಣ್ಣೆಂದು ಹಸುಗೂಸಿಗೆ ವಿಷ ಕುಡಿಸಿದ ತಂದೆ!

ಚನ್ನಪಟ್ಟಣ: ಹೆಣ್ಣೆಂಬ ಕಾರಣಕ್ಕೆ 1 ತಿಂಗಳ ಹಸುಗೂಸಿಗೆ ಹೆತ್ತ ತಂದೆಯೇ ವಿಷ ಕುಡಿಸಿರುವ ಅಮಾನುಷ ಘಟನೆ ತಾಲೂಕಿನ ಅಂಬಾಡಹಳ್ಳಿಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂಬಾಡಹಳ್ಳಿಯ ನಿವಾಸಿ ಶಿವಕುಮಾರ್‌ ಈ ಅಮಾನವೀಯ ಕೃತ್ಯ ಎಸಗಿರುವ ಆರೋಪಿ. ಶಿವಕುಮಾರ್‌, ವೀಣಾ ದಂಪತಿಗೆ 1 ತಿಂಗಳ ಹಿಂದೆ ಹೆಣ್ಣು ಮಗುವೊಂದು ಜನಿಸಿತು. ಹೆಣ್ಣು ಮಗು ಜನಿಸಿದಕ್ಕೆ ಬೇಸರಗೊಂಡಿದ್ದ ಶಿವಕುಮಾರ್‌, ಶುಕ್ರವಾರ ಮಗುವನ್ನು ಆಟವಾಡಿಸುವ ನೆಪದಿಂದ ಮನೆಯಿಂದ ಹೊರಗೆ ಎತ್ತಿಕೊಂಡು ಬಂದಿದ್ದಾನೆ. ಈ ವೇಳೆ ಕೀಟನಾಶಕವನ್ನು ಕುಡಿಸಿ, ಏನು ತಿಳಿಯದವನಂತೆ ಪುನಃ ಮಗುವನ್ನು ಮನೆಯಲ್ಲೇ ಮಲಗಿಸಿ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದಲ್ಲೇ ಮಗು ತೀವ್ರವಾಗಿ ಅಸ್ವಸ್ಥವಾಗಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವೀಣಾ ತನ್ನ ಪತಿ ವಿರುದ್ಧ ಚನ್ನಪಟ್ಟಣದ ಅಕ್ಕೂರು ಠಾಣೆಗೆ ಭಾನುವಾರ ದೂರು ನೀಡಿದ್ದು, ಸೋಮವಾರ ಆರೋಪಿ ಶಿವಕುಮಾರ್‌ನನ್ನು ಬಂಧಿಸಲಾಗಿದೆ.

Trending videos

Back to Top