CONNECT WITH US  

ಬನಶಂಕರಿ ದೇವಿ ಕಿರೀಟ, ಪಾದುಕೆ ಚಿನ್ನಕ್ಕೆ ಕನ್ನ; ಮೂವರ ವಿರುದ್ಧ ದೂರು

ಬೆಂಗಳೂರು: ನಗರದ ಪ್ರಸಿದ್ಧ ಬನಶಂಕರಿ ದೇವಿ ದೇವಾಲಯದಲ್ಲಿ ದೇವಿ ಕಿರೀಟ, ಪಾದುಕೆಯ 6.5 ಗ್ರಾಂ ಚಿನ್ನವನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಳದ ಪ್ರಧಾನ ಅರ್ಚಕ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ. ದೇವಾಲಯಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ವಿ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬನಶಂಕರಿ ದೇವಿಯ ದೇವಾಲಯದಲ್ಲಿ ದೇವಿಯ ಪಾದುಕೆಯ 1.6 ಗ್ರಾಂ ಮತ್ತು ಕಿರೀಟದ 5.15 ಗ್ರಾಂ ಚಿನ್ನವನ್ನು ಕತ್ತರಿಸಿ ತೆಗೆದಿರುವ ಘಟನೆ ಜೂನ್ 9ರಂದು ನಡೆದಿದ್ದು, ಜೂನ್ 10ರಂದು ಬೆಳಕಿಗೆ ಬಂದಿದೆ.

ದೇವಾಲಯದ ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ, ಪರಿಚಾರಕ ಸೋಮಶೇಖರ್ ಸೇರಿ ಮೂವರ ವಿರುದ್ಧ ಈ ಕಳ್ಳತನದ ಆರೋಪವನ್ನು ಹೊರಿಸಲಾಗಿದೆ. ಮೂವರ ವಿರುದ್ಧ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.  ಗರ್ಭಗುಡಿ ಪ್ರವೇಶಿಸೋದಕ್ಕೆ ನಾಲ್ವರಿಗಷ್ಟೇ ಅವಕಾಶ, ಹಾಗಾಗಿ ಸತ್ಯನಾರಾಯಣ ಶಾಸ್ತ್ರಿಗಳೇ ಈ ಕೃತ್ಯದ ಹಿಂದಿದ್ದಾರೆ ಎಂದು ಬನಶಂಕರಿ ದೇಗುಲ ಅಭಿವೃದ್ಧಿ ಸಮಿತಿ ಸದಸ್ಯರ ಆರೋಪಿದ್ದಾರೆ. 

ಆದರೆ ಸತ್ಯನಾರಾಯಣ ಶಾಸ್ತ್ರಿ ಅವರು, ಈ ಕೃತ್ಯವನ್ನು ನಾಗರಾಜಶಾಸ್ತ್ರಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಬನಶಂಕರಿ ದೇವಿ ದೇವಾಲಯದ ಪೂಜೆಯನ್ನು ಎರಡು ಕುಟುಂಬಗಳು ಮಾಡುತ್ತಿದ್ದು, ಉಭಯ ಕುಟುಂಬಗಳ ನಡುವಿನ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರಬೇಕೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಬೇಕಾಗಿದೆ.

Trending videos

Back to Top