CONNECT WITH US  

ದೇಶದಲ್ಲಿ ಎಚ್‌ಐವಿ ಸೋಂಕು ಹೆಚ್ಚಳ: ಮಾಜಿ ಸಚಿವ ಆತಂಕ

ಹಾಸನ: ದೇಶದಲ್ಲಿ ಮಾರಕ ಎಚ್‌ಐವಿ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಹಾಸನ ಜಿಲ್ಲೆಯಲ್ಲಿ 8ಸಾವಿರಕ್ಕೂ ಹೆಚ್ಚು ಎಚ್‌ಐವಿ ಸೋಂಕಿತರಿದ್ದಾರೆ ಎಂದು
ಮಾಜಿ ಸಚಿವ ರಾಮ್‌ದಾಸ್‌ ಆತಂಕ ವ್ಯಕ್ತಪಡಿಸಿದರು. ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ ಅನಂತ ಭಾರತ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ
ಹಮ್ಮಿಕೊಂಡಿದ್ದ ಎಚ್‌ಐವಿ ಸೋಂಕು ಮುಕ್ತ ಭಾರತ ಕಲ್ಪನೆಯಡಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 8 ಸಾವಿರ ಎಚ್‌ಐವಿ
ಸೋಂಕಿತರಲ್ಲಿ 5 ಸಾವಿರ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್‌ಐವಿ ಸೋಂಕಿತ ಮಕ್ಕಳನ್ನು ದತ್ತು ಸ್ವೀಕರಿಸುವ ಕೆಲಸ ಮಾಡಲಾಗಿದೆ ಎಂದು
ಹೇಳಿದರು.

15 ರಿಂದ 30 ವರ್ಷದೊಳಗಿನ ಯುವಕರಲ್ಲಿ ಹೆಚ್ಚು ಎಚ್‌ಐವಿ ಸೋಂಕು ಕಂಡು ಬರುತ್ತಿದೆ. ಅಲ್ಕೋಹಾಲ್‌, ಡ್ರಗ್ಸ್‌, ಚುಚ್ಚುಮದ್ದು ಹಾಗೂ ಬದಲಾದ ಜೀವನ ಶೈಲಿಯಿಂದ ಯುವಜನಾಂಗ ತತ್ತರಿಸುತ್ತಿದೆ. ಎಚ್‌ಐವಿ ಕಡಿಮೆಯಾಗುತ್ತಿದೆಎಂದು ಹೇಳುವಷ್ಟರಲ್ಲಿ ಮತ್ತಷ್ಟು ಹೆಚ್ಚಾಗುತ್ತಿರುವುದುದುರದೃಷ್ಟಕರ ಸಂಗತಿ. ಜಿಲ್ಲೆಯಲ್ಲಿ 250 ವಿದ್ಯಾರ್ಥಿಗಳು
ಹಾಗೂ ವಿದ್ಯಾರ್ಥಿನಿಯರು ಎಚ್‌ಐವಿ ಸೋಂಕಿನಿಂದನರಳುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲೆ ಶೈಲಜಕುಮಾರಿ,ಉಪನ್ಯಾಸಕರಾದ ಮಲ್ಲೇಶ್‌ಗೌಡ, ಶಾರದ ಹಾಗೂಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿನಾಗೇಶ್‌ ಮತ್ತಿತರರು ಭಾಗವಹಿಸಿದ್ದರು.

Trending videos

Back to Top