CONNECT WITH US  

ಹಾಸ್ಟೆಲ್‌ ರೂಲ್ಸ್‌ ನಮಗೇಕೆ? ವಿದ್ಯಾರ್ಥಿನಿಯರ ಪ್ರಶ್ನೆ

ತಿರುವನಂತಪುರ: ಇಲ್ಲಿನ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಲಿಂಗ ತಾರತಮ್ಯವನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದ್ದಾರೆ. ಹುಡುಗರು ಸಂಜೆ 6.30ರ ಬಳಿಕವೂ ಹಾಸ್ಟೆಲ್‌ ಪ್ರವೇಶಿಸಲು ಅವಕಾಶ ಇರುವಂತೆ ತಮಗೂ ಈ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ಹುಡುಗರ 6.30ರ ಬಳಿಕವೂ ಕಾಲೇಜಿನ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಆದರೆ, ನಮಗೆ ಮಾತ್ರ ಕಟ್ಟುನಿಟ್ಟಾಗಿ ಸಂಜೆ 6.30ಕ್ಕೆ ಹಾಸ್ಟೆಲ್‌ ಪ್ರವೇಶಿಸಬೇಕು ಎಂಬ ನಿಯಮ ರೂಪಿಸಲಾಗಿದೆ. ಹೀಗೆ ಕಠಿಣ ನಿಯಂತ್ರಣ ಹೇರುವುದರಿಂದ ತಮ್ಮ ಕಲಿಕಾ ಚಟುವಟಿಕೆಗೆ ಹಿನ್ನಡೆ ಆಗುತ್ತಿದೆ ಎಂದು ಕೆಲವು ವಿದ್ಯಾರ್ಥಿನಿಯರು ದೂರಿದ್ದಾರೆ.

ಇದೇ ವೇಳೆ, ಕಳೆದ 75 ವರ್ಷದಿಂದ ನಿರ್ಬಂಧ ಮುಂದುವರಿಸಿಕೊಂಡು ಬರಲಾಗುತ್ತಿದ್ದು, ಬದಲಾವಣೆ ಮಾಡಬೇಕಾದರೆ ಪಾಲಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಲೇಜಿನ ಪ್ರಿನ್ಸಿಪಾಲ್‌ ಎಸ್‌.ಶೀಲಾ ಹೇಳಿದ್ದಾರೆ.

Trending videos

Back to Top