CONNECT WITH US  

ಉಗ್ರರ ನಿಗ್ರಹ ಆಪರೇಷನ್‌ ನೇರ ಪ್ರಸಾರಕ್ಕೆ ಕೇಂದ್ರ ಬ್ರೇಕ್‌

ನವದೆಹಲಿ: ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ನಡೆಸುವ ಕಾರ್ಯಾಚರಣೆಯನ್ನು ಮಾಧ್ಯಮಗಳು ನೇರ ಪ್ರಸಾರ ಮಾಡಕೂಡದು ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಎಲ್ಲ ಸುದ್ದಿವಾಹಿನಿಗಳಿಗೆ ಸೂಚನೆ ನೀಡಿದೆ.

ಮಾ.20ರಂದು ಜಮ್ಮು-ಕಾಶ್ಮೀರದ ಕಠುವಾದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಕೆಲವು ವಾಹಿನಿಗಳು ನೇರ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಸಚಿವಾಲಯದಿಂದ ಈ ನಿರ್ದೇಶನ ಬಂದಿದೆ.

ಉಗ್ರರ ವಿರುದ್ಧ ನಡೆವ ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ಸ್ಥಳ, ಭದ್ರತಾಪಡೆಗಳ ಬಲ, ಚಟುವಟಿಕೆ, ತಂತ್ರ ಹಾಗೂ ಇನ್ನಿತರೆ ವಿಚಾರಗಳ ಬಗ್ಗೆ ಮಾಧ್ಯಮಗಳು ಗಮನ ಕೇಂದ್ರೀಕರಿಸಬಾರದು. ತನ್ಮೂಲಕ ಭಯೋತ್ಪಾದಕರು ಹಾಗೂ ಅವರ ನಿಯಂತ್ರಕರಿಗೆ ಕಾರ್ಯಾಚರಣೆ ಕುರಿತ ಮಾಹಿತಿ ಸಿಗುವಂತೆ ಮಾಡಬಾರದು ಎಂದು ಸಲಹೆ ಮಾಡಿದೆ.

Trending videos

Back to Top