CONNECT WITH US  

ಸಂಕಷ್ಟಕ್ಕೀಡಾದ ಮಾವು ಬೆಳೆಗಾರರಿಗೆ ಪರಿಹಾರ: ಕಮಲಾಕ್ಷಿ

ಚಿಂತಾಮಣಿ: ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿಲೆಗಳಲ್ಲಿ ನೀರಿನ ಕೊರತೆಯಿಂದ ಒಣಗುತ್ತಿರುವ ಮಾವಿನ ಮರಗಳ ಸಮೀಕ್ಷೆ ನಡೆಸಿ ಸಂಕಷ್ಟಕ್ಕೀಡಾದ ಮಾವು ಬೆಳೆಗಾರರಿಗೆ ಪರಿಹಾರ ನೀಡಲು ರಾಜ್ಯ ಮಾವು ಅಭಿವೃದ್ಧಿ ನಿಗಮ ಚಿಂತನೆ ನಡೆಸಿದೆ ಎಂದು ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ಭರವಸೆ ನೀಡಿದರು.

ತಾಲೂಕಿನ ಕುರುಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಅವಳಿ ಜಿಲೆಯ ಮಾವು ಬೆಳೆಗಾರರಿಗೆ ಹಮ್ಮಿಕೊಂಡಿದ್ದ ನೂತನದ "ಭೂಮಾರ್‌' ಔಷಧಿ ಸಿಂಪಡಿಸುವ ಯಂತ್ರದ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

"ಭೂಮಾರ್‌' ಯಂತ್ರ: ಮಾವು ಬೆಳೆಗಾರರಿಗೆ ಆಶಾಕಿರಣವಾಗಿರುವ ಔಷಧಿ ಸಿಂಪಡಿಸುವ "ಭೂಮಾರ್‌' ಯಂತ್ರಗಳನ್ನು ಮಾವು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಾವು ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಬದ್ಧವಾಗಿದ್ದು, ಮಾವು ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ, ತಾಂತ್ರಿಕ ತರಬೇತಿ, ಆರ್ಥಿಕ ನೆರವು ನೀಡಲು ನಿಗಮ 1 ಕೋಟಿ ರೂ. ವಿಶೇಷ ಅನುದಾನ ಮೀಸಲಿಟ್ಟಿದೆ ಎಂದರು.

ಕೋಲಾರದ ತೋಟಗಾರಿಕೆ ಮಹಾ ವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ನಾಚೇಗೌಡ ಮಾತನಾಡಿ, ಹೊಸ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿರುವ "ಭೂಮಾರ್‌' ಔಷಧಿ ಸಿಂಪಡಿಸುವ ಯಂತ್ರ ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿÇÉೆಗಳ ಮಾವು ಬೆಳೆಗಾರರಿಗೆ ವರದಾನವಾಗಿದೆ. ಶೇ.40 ರಷ್ಟು ನೀರು ಇದರಿಂದ ಉಳಿತಾಯವಾಗಲಿದೆ. ಜೊತೆಗೆ ಇಂದಿನ ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಕೀಟ ಬಾಧೆ ತಡೆಯುವಲ್ಲಿ ಇಟಾಲಿಯನ್‌ "ಭೂಮಾರ್‌' ಪ್ರಧಾನ ಪಾತ್ರ ವಹಿಸಲಿದ್ದು, ಮಾವು ಬೆಳೆಗಾರರು ಇದನ್ನು ಕಡ್ಡಾಯವಾಗಿ ಬಳಿಸಿದರೆ ಉತ್ತಮ ಫ‌ಸಲು ಪಡೆಯಬಹುದೆಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಮಾವು ಬೆಳೆಗಾರರ ಸಂಘದ ಜಿಲಾಧ್ಯಕ್ಷ ಕೆ.ಶ್ರೀನಿವಾಸಗೌಡ ಮಾತನಾಡಿ, ಮಾವು ಬೆಳೆಗಾರರಿಗೆ ತುಂಬ ಉಪಯುಕ್ತವಾಗಿರುವ ಔಷದಿ ಸಿಂಪಡಿಸುವ ಭೂಮಾರ್‌ ಬಗ್ಗೆ ಎಲ್ಲಾ ಮಾವು ಬೆಳೆಗಾರರ ಹಾಗೂ ರೈತರ ಗುಂಪುಗಳಿಗೆ ರಿಯಾಯಿತಿ ಧರದಲ್ಲಿ ವಿತರಣೆಗೆ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿ, ಮಾವು ಸಂಶೋಧಾನ ಮತ್ತು ಸಂಸ್ಕರಣಾ ಕೇಂದ್ರದಲ್ಲಿ ಇತಂಹ ಯಂತ್ರಗಳನ್ನು ಮಾವು ಬೆಳೆಗಾರರಿಗೆ ಬಾಡಿಗೆ ರೂಪದಲ್ಲಿ ದೊರೆಯಲು ವ್ಯವಸ್ಥೆ ಮಾಡಬೇಕೆಂದರು. ಅವಳಿ ಜಿಲೆಯಲ್ಲಿ ಮಾವು ಮರಗಳು ನೀರಿಲ್ಲದೇ ಒಣಗುತ್ತಿರುವುದರಿಂದ ನೀರನ್ನು ಟ್ಯಾಂಕರ್‌ಗಳ ಮೂಲಕ ಮಾವಿನ ಮರಗಳಿಗೆ ಪೂರೈಸಲು ಇಲಾಖೆ ರೈತರಿಗೆ ರಿಯಾಯಿತಿ ಧರದಲ್ಲಿ ಟ್ಯಾಂಕರ್‌ಗಳನ್ನು ಒದಗಿಸಬೇಕೆಂದರು.

ರೈತರಿಗೆ ಪ್ರತ್ಯಾಕ್ಷಿಕೆ: ಇದೇ ಸಂದರ್ಭದಲ್ಲಿ ಮಾವಿನ ಮರಗಳಿಗೆ ರೋಗ ಹಾಗೂ ಕೀಟಗಳನ್ನು ನಾಶಪಡಿಸಲು ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಂದಿರುವ "ಭೂಮಾರ್‌' ಎಂಬ ಸಿಂಪಡಣೆ ಯಂತ್ರದ ಕುರಿತು ಸಂಪನ್ನೂಲ ವ್ಯಕ್ತಿ ಸಂಪತ್‌ ಮಾವು ಬೆಳಗಾರರಿಗೆ ಅಗತ್ಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಹೊನ್ನಭೈರಯ್ಯ, ಮಾಡಿಕೆರೆ ಮಾವು ಸಂಸ್ಕರಣಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ನರೇಂದ್ರ ಬಾಬು, ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಮಂಜುನಾಥಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸದಾನಂದ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರಿ, ಸಹಾಯಕ ನಿರ್ದೇಶಕ ಮಂಜನ್‌ ಕುಮಾರ್‌ ಸೇರಿದಂತೆ ಅವಳಿ ಜಿಲೆಯ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಪ್ರಗತಿಪರ ರೈತರು, ಮಾವು ಬೆಳೆಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭೀಕರ ಬರದಿಂದಾಗಿ ಅವಳಿ ಜಿಲೆಯ ಮಾವು ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಮಾವು ಬೆಳೆಗಾರರಿಗೆ ಸೂಕ್ತ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ನಿಗಮ ಮಾವು ಬೆಳೆಗಾರರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಕೈ ಜೋಡಿಸಲಿದೆ.
*ಕಮಲಾಕ್ಷಿ ರಾಜಣ್ಣ, ಅಧ್ಯಕ್ಷೆ, ರಾಜ್ಯ ಮಾವು ಅಭಿವೃದ್ಧಿ ನಿಗಮ

Trending videos

Back to Top