CONNECT WITH US  

ಖಂಡಿಸಿ ನಾಟಕ ಮಾಡಿದ್ದರೂ ಖುಷಿ: ಕಾರ್ನಾಡ್‌

ಉಡುಪಿ: ಮಣಿಪಾಲದ ನರಸಿಂಗೆ ದೇವಸ್ಥಾನದವರಿಗಾಗಿ ರಂಗಭೂಮಿ ಸಂಸ್ಥೆಯವರು ಆಡಬೇಕಾಗಿದ್ದ ತನ್ನ "ನಾಗಮಂಡಲ' ನಾಟಕದ ಪ್ರದರ್ಶನಕ್ಕೆ ದೇವಸ್ಥಾನದಿಂದಲೇ ಆಕ್ಷೇಪಣೆ ಬಂದಿರುವ ಸಂದರ್ಭ ಸಂಸ್ಥೆ ಸದಸ್ಯರು "ನಾವು ಬೇಕಾದರೆ ಕಾರ್ನಾಡರನ್ನು ಖಂಡಿಸಿಯೇ ನಾಟಕ ಪ್ರದರ್ಶನ ಮಾಡುತ್ತೇವೆ' ಎಂದು ಹೇಳಿರುವುದಾಗಿ ಬಂದ ವರದಿಯನ್ನು ರಂಗಭೂಮಿ ಸದಸ್ಯರು ಅಲ್ಲಗಳೆದಿ¨ªಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಿರೀಶ್‌ ಕಾರ್ನಾಡ್‌, ""ನನ್ನ ನಾಟಕದ ಇಷ್ಟೆಲ್ಲ ಪ್ರಯೋಗಗಳನ್ನು ಮಾಡಿರುವ ಈ ಸಂಸ್ಥೆಗೆ ನನ್ನ ತುಂಬು ಹೃದಯದ ಕೃತಜ್ಞತೆ. ಆದರೆ ನಾಟಕಕ್ಕೂ ಗೋಮಾಂಸ ಭಕ್ಷಣೆ ಕುರಿತ ನನ್ನ ಹೇಳಿಕೆಗೂ ಯಾವ ಸಂಬಂಧವೂ ಇಲ್ಲ. ಅವರು ನನ್ನ ಹೇಳಿಕೆ ಖಂಡಿಸುತ್ತಲೇ ನಾಟಕ ಆಡುತ್ತಿದ್ದರೂ ನನಗೆ ಅಷ್ಟೇ ಖುಷಿ. ಅವರ ಬಗ್ಗೆ ಅಷ್ಟೇ ಆತ್ಮೀಯತೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Trending videos

Back to Top