CONNECT WITH US  

ನಿಮ್ಮ ಮಕ್ಕಳ ಭವಿಷ್ಯ

ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ ಗುಣ ಹೊಂದಿರಬಹುದು; ಸುಮ್ನೆ ಗಮನಿಸಿ

ಜನವರಿ
 ಜನವರಿಯಲ್ಲಿ ಹುಟ್ಟಿದ ಬಹುಪಾಲು ಮಕ್ಕಳಿಗೆ, ಜತೆಗಿರುವ ಎಲ್ಲರಿಗಿಂತ ನಾನೇ ತುಂಬಾ ಚೆನ್ನಾಗಿದ್ದೀನಿ ಅನ್ನೋ ಭ್ರಮೆ ಇರುತ್ತದೆ. ಹಾಗಾಗಿ, ಸಾಧಾರಣ ಸೌಂದರ್ಯದ ಮಗು ಕೂಡ
ಮನೆಯವರ ಮುಂದೆ ನಿಂತು- ನಾನು ಚಂದಾಗಿದೀನಿ ಗೊತ್ತಾ? ಎಂದು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಹೇಳುತ್ತದೆ. ತನ್ನ ಮಾತನ್ನು ಎಲ್ಲರೂ ಒಪ್ಪಲಿ ಎಂದು ಆಸೆ ಪಡುತ್ತದೆ. ಶ್ರೀಮಂತರ ಮಕ್ಕಳ ಥರಾ ಬದುಕೋದನ್ನ ಇಷ್ಟ ಪಡುತ್ತದೆ.  ಕಂಡ ಕಂಡವರನ್ನೆಲ್ಲ ಫ್ರೆಂಡ್ಸ್‌ ಮಾಡಿಕೊಳ್ಳಲ್ಲ. ಅಪ್ಪ-ಅಮ್ಮ ಭವಿಷ್ಯದ ಬಗ್ಗೆ ಮಾತಾಡ್ತಾ ಕೂತಿದ್ರೆ ಅದಕ್ಕೂ ನನಗೂ ಸಂಬಂಧವೇ ಇಲ್ಲ ಅಂತ ಫ್ರೆಂಡ್ಸ್‌ ಜತೆ
ಮೈದಾನಕ್ಕೆ ಹೋಗಿ ಆಟ ಆಡ್ತಾ ಕಾಲ ಕಳೀತಿರುತ್ತೆ. ಜನವರಿಯಲ್ಲಿ ಹುಟ್ಟಿದ ಮಕ್ಕಳಿಗೆ
ಶ್ರದ್ಧೆ, ಶಿಸ್ತು ವಿಪರೀತ. ಮನೇಲಿ ಯಾವುದಾದ್ರೂ ಕೆಲಸ ಹೇಳಿದ್ರೆ ಎಷ್ಟೇ ಕಷ್ಟವಾದ್ರೂ ಮಾಡಿ ಮುಗಿಸಿ ಎಲ್ಲರಿಂದ ವೆರಿಗುಡ್‌ ಅನ್ನಿಸಿಕೊಳ್ತವೆ.

ಫೆಬ್ರವರಿ
 ಆನೆ ನಡೆದದ್ದೇ ದಾರಿ ಅಂತೀವಲ್ಲ- ಹಾಗಿರ್ತವೆ ಫೆಬ್ರವರೀಲಿ ಹುಟ್ಟಿದ ಮಕ್ಕಳು. ಅವು ಯಾವ ಶಿಸ್ತಿಗೂ ಒಳಪಡೋದಿಲ್ಲ. ಸ್ಕೂಲಲ್ಲಿ ಕೂಡ ಹಾಗೇ ಇರ್ತವೆ. ಅದೇ ಕಾರಣಕ್ಕೆ- ನಿಮ್ಮ ಮಕ್ಕಳಿಗೆ ಸ್ವಲ್ಪ ಡಿಸಿಪ್ಲೀನ್‌ ಹೇಳ್ಕೊಡಿ ಅಂತ ಸ್ಕೂಲಿಂದ ನೋಟಿಸ್‌ ಬರುತ್ತೆ. ತುಂಬಾ ಬೇಗ, ತೀರಾ ಸಣ್ಣ ವಿಷಯಕ್ಕೂ ಸಿಟ್ಟಿಗೇಳ್ತವೆ. ಸಿಟ್ಟು ಬಂದಾಗ ಮುಖ ಊದಿಸಿಕೊಂಡು ಕೂತಿರ್ತವೆ. ಕಂಡೀಷನ್‌ ಹಾಕಿದಷ್ಟೂ ಅದನ್ನ ವಿರೋಧಿಸ್ತವೆ. ಇಷ್ಟವಾಗದ ವಸ್ತುಗಳನ್ನು ತೆಗೆದು ಬೀದಿಗೇ ಎಸೆದು ಬಿಡ್ತವೆ. ತಮ್ಮಷ್ಟಕ್ಕೆ ತಾವೇ
ಮಾತಾಡಿಕೊಳ್ತವೆ.ಕಂಡಲ್ಲೆಲ್ಲಾ ಬೇಕು ಅನ್ನುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನಿಷ್ಟದಂತೆ ಬದುಕೋಕೆ ಆಸೆಪಡ್ತವೆ. ಅಪ್ಪ-ಅಮ್ಮನ ಕಂಟ್ರೋಲ್‌ನಲ್ಲಿ ಇರುವುದನ್ನೂ ಇಷ್ಟಪಡಲ್ಲ.

ಮಾರ್ಚ್‌
 ಅದು ಸ್ಕೂಲ್‌ ಇರಬಹುದು, ಮನೆ ಇರಬಹುದು. ಬಸ್‌ ಆಗಿರಬಹುದು. ಅಲ್ಲೆಲ್ಲ ಸೈಲೆಂಟಾಗಿರಬೇಕು ಅನ್ನೋದು ಮಾರ್ಚ್‌ ತಿಂಗಳಲ್ಲಿ ಹುಟ್ಟಿದ್ದ ಮಕ್ಕಳ ಅಪೇಕ್ಷೆ ಆಗಿರುತ್ತೆ. ಏನಾದ್ರೂ ಗದ್ದಲ ಆದ್ರೆ ಅವು ಕೂತಲ್ಲೆ ಮುಖ ಕಿವಿಚುತ್ತವೆ. ಹಾಡು ಲಘು ಸಂಗೀತ ಅಂದ್ರೆ ಈ ಮಕ್ಕಳಿಗೆ ಸಖತ್‌ ಇಷ್ಟ. ಮಾರ್ಚ್‌ ತಿಂಗಳಲ್ಲಿ ಹುಟ್ಟಿದ ಮಕ್ಕಳ ಯೋಚನೆಯೇ ವಿಚಿತ್ರ. ಅಪ್ಪನೋ, ಅಮ್ಮನೋ ಕತೆ ಹೇಳಲು ನಿಂತರೆ, ಬೇರೇನೋ ಪ್ರಶ್ನೆ ಕೇಳಿ ಅವರನ್ನು ಪೇಚಿಗೆ ಸಿಕ್ಕಿಸ್ತವೆ. ದೂರದಲ್ಲಿ ಯಾವುದೋ ಹಾಡು, ನಾಟಕದ ಡೈಲಾಗ… ಕೇಳಿಬಂದ್ರೆ ಅದನ್ನೇ ಕೇಳ್ತಾ ಮೈಮರೆಯೋದು;ಮೊದಲು ನಾನು ಉದ್ಧಾರ ಆಗಬೇಕು ಅಂತ ಯೋಚಿಸೋದು,  ಹಾಗೆಯೇ, ಬದುಕೋದು ಈ ಮಕ್ಕಳ ಗುಣ.

ಏಪ್ರಿಲ್‌: ಯಾವಾಗ್ಲೂ ಚಟಪಟ ಮಾತಾಡ್ತಾನೇ ಇರೋದು, ತಮಾಷೆಯಾಗಿ ಮಾತಾಡಿ ಜೊತೆಗಿದ್ದವರನ್ನು ನಗಿಸೋದು ಏಪ್ರಿಲ್‌ ತಿಂಗಳಲ್ಲಿ ಹುಟ್ಟಿದ ಮಕ್ಕಳ ಗುಣ ವಿಶೇಷ. ಈ ಮಕ್ಕಳಿಗೆ ಕೆಟ್ಟ ಕುತೂಹಲ ಜಾಸ್ತಿ. ಅನ್ನ ಹೇಗೆ ಆಗುತ್ತೆ? ಅಲಾರಾಂ ಹೇಗೆ ಹೊಡೆಯುತ್ತೆ? ಬಸ್ಸು ಹೇಗೆ ಓಡುತ್ತೆ ಎಂದೆಲ್ಲಾ ಪ್ರಶ್ನೆ ಕೇಳಿ ಸುಸ್ತು ಮಾಡ್ತವೆ. ಪ್ರಯಾಣ ಅಂದ್ರೆ ಸಖತ್‌ ಇಷ್ಟ. ಹೊರಗೆ ಹೋಗೋಣಾÌ ಅಂತ ಸುಮ್ನೆ ಕೇಳಿದ್ರೂ ಸಾಕು; ಅಪ್ಪ-ಅಮ್ಮನಿಗಿಂತ ಮೊದಲೇ ರೆಡಿ ಆಗಿರ್ತವೆ. ಚಿಕ್ಕಚಿಕ್ಕ ವಿಷಯವನ್ನೂ ನೆನಪಲ್ಲಿ ಇಟ್ಕೊಂಡಿರ್ತವೆ. ಜತೆಗಿದ್ದವರನ್ನು ಅನುಕರಿಸುವುದು, ಅಣಕಿಸುವುದು ಈ ಮಕ್ಕಳ
ಪ್ರಿಯವಾದ ಹವ್ಯಾಸ. ಆಟದ ಸಾಮಾನು ತಂದುಕೊಟ್ರೆ ಅದನ್ನು ತಗೊಂಡು ಆಟ ಆಡೋದಿಲ್ಲ.
ಬದಲಿಗೆ, ಒಂದೇ ದಿನದಲ್ಲಿ ಅದನ್ನೆಲ್ಲ ಬಿಚ್ಚಿ, ಒಡೆದು ಹಾಕಿ, ರಿಪೇರಿಗೂ ಟ್ರೈಮಾಡಿ ಹಾಳು ಮಾಡಿಬಿಡ್ತವೆ. ಮನೆ, ಸ್ಕೂಲು, ಮದುವೆ ಮನೆ ಹೀಗೆ ಎಲ್ಲಿಗೇ ಹೋದ್ರೂ ಯಾರು ಸಿಕ್ತಾರೋ ಅವರನ್ನು ಫ್ರೆಂಡ್‌ ಮಾಡಿಕೊಂಡು ಖುಷಿಯಾಗಿರ್ತವೆ.

(ಮುಂದುವರಿಯುವುದು)

Trending videos

Back to Top