CONNECT WITH US  

2002ರಲ್ಲೇ ಸಲ್ಮಾನ್ ಡ್ರೈವರ್ ಲೆಸ್ ಕಾರನ್ನು ಕಂಡುಹಿಡಿದಿದ್ರಂತೆ!

ನವದೆಹಲಿ: ದೇಶ, ವಿದೇಶಗಳ ಹೈಪ್ರೊಫೈಲ್ ಪ್ರಕರಣಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣಕ್ಕೆ ಸುದ್ದಿ, ಪ್ರತಿಕ್ರಿಯೆ, ಟೀಕೆ, ಟಿಪ್ಪಣಿ ವ್ಯಕ್ತವಾಗುತ್ತಿರುತ್ತದೆ. ಅದೇ ರೀತಿ 2002ರ ಹಿಟ್ ಅಂಡ್ (ಸಲ್ಮಾನ್ ಹಿಟ್ ಅಂಡ್ ವಿನ್) ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಂಬೆ ಹೈಕೋರ್ಟ್ ಗುರುವಾರ ಖುಲಾಸೆಗೊಳಿಸಿರುವುದಕ್ಕೆ ಟ್ವೀಟಿಗರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಇದೀಗ ಖಾನ್ ವಿರುದ್ಧ ವ್ಯಂಗ್ಯದ ಜೋಕ್ ಗಳನ್ನು ಹರಿಯಬಿಟ್ಟಿದ್ದಾರೆ.....

ಹೌದು...ಇಂಟರ್ನೆಟ್ ದಿಗ್ಗಜ ಸಂಸ್ಥೆ ಗೂಗಲ್, ಸೆಲ್ಫ್ ಡ್ರೈವಿಂಗ್ ಕಾರು(ಡ್ರೈವರ್ ಲೆಸ್ ಕಾರು) ಪರೀಕ್ಷಾರ್ಥವಾಗಿ 2020ರ ವೇಳೆಗೆ  ಲಭ್ಯವಾಗಲಿದೆ ಎಂದು ಹೇಳಿತ್ತು. ಆ ಹಿನ್ನೆಲೆಯಲ್ಲಿ ನಿನ್ನೆ ಹಿಟ್ ಅಂಡ್ ರನ್ ಕೇಸಲ್ಲಿ ಸಲ್ಮಾನ್ ಖಾನ್ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿರುವುದಕ್ಕೆ ಜೋಕ್ ಮೂಲಕ ಟ್ವೀಟಿಗರು ವ್ಯಂಗ್ಯವಾಡಿದ್ದಾರೆ.

ಅದೇನಪ್ಪಾ ಅಂದರೆ, ಗೂಗಲ್ ಸಂಸ್ಥೆ ತನ್ನ ಬಹುಮಹತ್ವಾಕಾಂಕ್ಷೆಯ ಯೋಜನೆ(ಸೆಲ್ಫ್ ಡ್ರೈವಿಂಗ್ ಕಾರು)ಯಿಂದ ಹಿಂದೆ ಸರಿಯಬೇಕು. ಯಾಕೆಂದರೆ 49ರ ಹರೆಯದ ನಟ ಸಲ್ಮಾನ್ ಖಾನ್ ಸುಮಾರು 13 ವರ್ಷಗಳ (2002) ಹಿಂದೆಯೇ ಕಂಡುಹಿಡಿದಿದ್ದಾರೆ! ಎಂದು ಟ್ವೀಟರ್ ನಲ್ಲಿ ಜೋಕ್ ಹರಿದಾಡುತ್ತಿದೆ.

ಹೌದು 2002ರ ಸೆಪ್ಟೆಂಬರ್ ನಲ್ಲಿ ಕುಡಿದು ತನ್ನ ಕಾರನ್ನು ಚಲಾಯಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಖಾನ್ ಎಲ್ಲಾ ಆರೋಪದಿಂದ ಮುಕ್ತರಾಗಿದ್ದಕ್ಕೆ ಟ್ವೀಟರ್ ನಲ್ಲಿ ಗುರುವಾರದಿಂದಲೇ ದೊಡ್ಡ ಮಟ್ಟದ ಜೋಕ್, ಟೀಕೆಗಳು ಹರಿದಾಡುತ್ತಿದೆ. ನಿನ್ನೆಯಿಂದ hashtag #SalmanVerdict ಟಾಪ್ ಟ್ರೆಂಡ್ ಆಗಿದೆ.

Trending videos

Back to Top