CONNECT WITH US  

ಪುಟಾಣಿ ಸಫಾರಿ ರೆಡಿ

ಕನ್ನಡದಲ್ಲಿ ಎಷ್ಟೋ ಸಿನಿಮಾಗಳು ಸದ್ದಿಲ್ಲದಂತೆಯೇ ಶುರುವಾಗಿ, ಬಿಡುಗಡೆಯಾಗಿರುವ ಉದಾಹರ ಣೆಗಳಿವೆ. ಇದಕ್ಕೆ ಮಕ್ಕಳ ಸಿನಿಮಾಗಳೂ ಹೊರತಲ್ಲ. ಈಗಾಗಲೇ ಕನ್ನಡದಲ್ಲಿ ಮಕ್ಕಳ ಕುರಿತ ಅನೇಕ ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಈಗ "ಪುಟಾಣಿ ಸಫಾರಿ ಎಂಬ ಸಿನಿಮಾ ಕೂಡ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರಕ್ಕೆ ರವೀಂದ್ರ ವೆಂಶಿ ನಿರ್ದೇಶಕರು.

ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ರವೀಂದ್ರ ವೆಂಶಿ, "ನೋಡಲೇ ಬೇಕಾದ ನೂರೊಂದು ಕನ್ನಡ ಚಿತ್ರಗಳು', "ಬೇಡ ಗೆಳೆಯ ನಂಟಿಗೆ ಹೆಸರು' ಮತ್ತು "ಕ್ಲಾಸು ಮಾಸ್ತು' ಪುಸ್ತಕ ರಚಿಸಿದ್ದಾರೆ. ಅವರ ನಿರ್ದೇಶನದ ಕಿರುಚಿತ್ರ "ನಿರಾಕೃತ' ಹಲವು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದೆ. "ಪುಟಾಣಿ ಸಫಾರಿ'ಗೆ ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಬಿ.ಎಸ್‌.ಚಂದ್ರಶೇಖರ್‌, ಕೇಬಲ್‌ ಚಂದ್ರು ನಿರ್ಮಾಪಕರು. ಜಗದೀಶ್‌, ಎಂ.ಕೆ. ಮಂಜುನಾಥ್‌, ಬಿ.ಕೇಬಲ…  ಮಂಜಣ್ಣ ಸಹ ನಿರ್ಮಾಪಕರು.

"ಪುಟಾಣಿ ಸಫಾರಿ' ಮಕ್ಕಳ ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ತಯಾರಾ ಗಿರುವ ಚಿತ್ರ. ಇದು ಮಕ್ಕಳ ಚಿತ್ರವೇ ಆಗಿದ್ದರೂ ಕಮರ್ಷಿಯಲ… ಅಂಶಗಳನ್ನು ಒಳಗೊಂಡಿರುವ ಸಿನಿಮಾ. ಇದೊಂದು ಸಾಹಸಮಯ ಕಥೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ, ವನ್ಯಮೃಗಗಳ ನಡುವೆ ಸಮಾಜದ ಎರಡು ಭಿನ್ನ ಸ್ತರದಿಂದ ಬಂದಂತಹ ಮಕ್ಕಳಿಬ್ಬರು ಅನಿವಾರ್ಯವಾಗಿ ಬದುಕಬೇಕಾದ ಸಂದರ್ಭ ಬಂದಾಗ, ಹೇಗೆ ಅದನ್ನು ಎದುರಿಸುತ್ತಾರೆ ಎಂಬುದೇ ಕಥಾವಸ್ತು.

ಇಲ್ಲಿ ಪ್ರಾಣಿಗಳಿವೆ, ದಟ್ಟವಾದ ಕಾನನವಿದೆ. ಒಂದಷ್ಟು ಹಾಸ್ಯ, ಸೆಂಟಿಮೆಂಟ್‌ ಎಲ್ಲವೂ ಇದೆ. ಶಿರಸಿ, ಸಿದ್ಧಾಪುರ, ಮುಂತಾದ ಕಾಡುಗಳಲ್ಲಿ, ಬಂಡೀಪುರ, ಕೆ.ಗುಡಿ ಮುಂತಾದ ರಕ್ಷಿತಾರಣ್ಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಕ್ಕಳಿಬ್ಬರು ವನ್ಯ ಮೃಗಗಳಿಗೆ ಮುಖಾಮುಖೀಯಾಗುವ ದೃಶ್ಯಗಳು ಈ ಚಿತ್ರದಲ್ಲಿದೆ. "ಜಂಗಲ… ಬುಕ್‌' ಮಾದರಿಯಲ್ಲಿ ಚಿತ್ರ ತಯಾರಾಗಿದ್ದು, ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದೆ ಎಂಬ ಖುಷಿ ಚಿತ್ರತಂಡಕ್ಕಿದೆ.. ಯೋಗರಾಜ… ಭಟ… ಮಕ್ಕಳ ಚಿತ್ರಕ್ಕಾಗಿ ಒಂದು ಹಾಡನ್ನು ಬರೆದಿರುವುದು ವಿಶೇಷ. ವೀರ್‌ ಸಮರ್ಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

ಚಿತ್ರದಲ್ಲಿ ಮಾ ರಾಕಿನ, ಮಾ ರಾಜೀವ್‌ ಪ್ರಥಮ್‌, ಬೇಬಿ ಬೃಂದಾ, ಬೇಬಿ ಮಾನಸ, ಮನೀಶ್‌ ಬಲ್ಲಾಳ್‌, ಸಹನಾಶ್ರೀ, ಕೈಲಾಶ್‌, ಜಗದೀಶ್‌, ವಿಜಯಾ ಇತರರು ನಟಿಸಿದ್ದಾರೆ. ಜೀವನ್‌ ಗೌಡ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ರವಿಚಂದ್ರನ್‌ ಸಂಕಲನ ಮಾಡಿದ್ದಾರೆ.

Trending videos

Back to Top