CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯಾವುದು ಮೊದಲು ಈ ಮೂರರಲ್ಲಿ?

ಪುನೀತ್‌ ಅಭಿನಯದ ಚಿತ್ರಗಳಲ್ಲಿ ಯಾವುದು ಫ‌ಸ್ಟು, ಯಾವುದು ನೆಕ್ಸ್ಟು

ಪುನೀತ್‌ ರಾಜಕುಮಾರ್‌ ಅಭಿನಯದ "ಅಂಜನಿಪುತ್ರ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೂರು ವಾರಗಳ ಯಶಸ್ವಿ ಪ್ರದರ್ಶನವನ್ನು ಮುಗಿಸಿರುವ ಚಿತ್ರವು, ಇದೀಗ ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಚಿತ್ರ ಯಾವುದಾಗಲಿದೆ ಎಂಬ ಗೊಂದಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಹೌದು, ಪುನೀತ್‌ ಅವರ ಮುಂದಿನ ಚಿತ್ರ ಯಾವುದು? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಕಾರಣ, ಪುನೀತ್‌ ಅವರ ಕೈಯಲ್ಲಿ ಮೂರು ಚಿತ್ರಗಳಿರುವುದು. ಹೌದು, ಪುನೀತ್‌ ಮುಂದೆ ಸದ್ಯಕ್ಕೆ ಮೂರು ಚಿತ್ರಗಳಿವೆ. ಶಶಾಂಕ್‌ ನಿರ್ದೇಶನದ ಒಂದು ಚಿತ್ರದಲ್ಲಿ ನಟಿಸುವುದಾಗಿ ಸ್ವತಃ ಪುನೀತ್‌ ಕೆಲವು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು.

ಅದಾದ ಮೇಲೆ, ಸಂತೋಷ್‌ ಆನಂದರಾಮ್‌ ಸಹ ಪುನೀತ್‌ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುವುದಾಗಿ ಹೇಳಿದ್ದರು. ಈಗ ಪವನ್‌ ಒಡೆಯರ್‌ ಸಹ ಪುನೀತ್‌ ಅಭಿನಯದಲ್ಲಿ ಚಿತ್ರ ನಿರ್ದೇಶಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗೆ ಪುನೀತ್‌ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಯಾವುದು ಮೊದಲು ಸೆಟ್ಟೇರುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಈ ಪೈಕಿ ಪುನೀತ್‌ ಮೊದಲು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ಪವನ್‌ ಒಡೆಯರ್‌ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಇತ್ತೀಚೆಗೆ ರಾಕ್‌ಲೈನ್‌ ವೆಂಕಟೇಶ್‌ ಅವರೇ ತಮ್ಮ ಚಿತ್ರ ಮಾರ್ಚ್‌ನಲ್ಲಿ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಸಂತೋಷ್‌ ಆನಂದರಾಮ್‌ ತಮ್ಮ ಚಿತ್ರವೇನಿದ್ದರೂ ಜೂನ್‌ ಅಥವಾ ಜುಲೈನಲ್ಲಿ ಪ್ರಾರಂಭವಾಗಬಹುದು ಎಂದು ಹೇಳಿದ್ದರು.

ಇವೆರಡೂ ಚಿತ್ರಗಳ ಮಧ್ಯೆ ಶಶಾಂಕ್‌ ಅವರ ಹೊಸ ಸಿನಿಮಾ ಶುರುವಾಗಬಹುದು ಅಥವಾ ಶಶಾಂಕ್‌ ನಿರ್ದೇಶನದ ಸಿನಿಮಾ ನಂತರ, ಸಂತೋಷ್‌ ಆನಂದರಾಮ್‌ ಚಿತ್ರ ಪ್ರಾರಂಭವಾಗಬಹುದು. ಒಟ್ಟಿನಲ್ಲಿ ಯಾವುದು ಮೊದಲು ಮತ್ತು ಯಾವ ಸಿನಿಮಾದ ನಂತರ ಯಾವುದು ಎಂಬ ಪ್ರಶ್ನೆ ಪುನೀತ್‌ ಅವರ ಅಭಿಮಾನಿಗಳ ವಲಯದಲ್ಲಿದೆ. ಈ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

Back to Top