CONNECT WITH US  

ನನ್ನ ಕುರಿತ ಸಿನಿಮಾಕ್ಕೆ ಅನುಮತಿ ಕೊಟ್ಟಿದ್ದೇನೆ: ರೂಪಾ ಮೌದ್ಗಿಲ್‌

ಪರಪ್ಪನ ಅಗ್ರಹಾರ ಕಾರಾಗೃಹದ ಅಕ್ರಮಗಳನ್ನು ಬಯಲಿಗೆಳೆದು ಸಂಚಲನ ಮೂಡಿಸಿದ ಪೊಲೀಸ್‌ ಅಧಿಕಾರಿ ಡಿಐಜಿ ರೂಪಾ ಮೌದ್ಗಿಲ್‌ ಅವರ ಕುರಿತಾಗಿ ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ನಿರ್ದೇಶಕ ಎ.ಎಂ.ಆರ್‌.ರಮೇಶ್‌ ಅವರು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು.

ಇತ್ತೀಚೆಗೆ "ಸೆಕೆಂಡ್‌ ಹಾಫ್' ಚಿತ್ರದ ಟ್ರೇಲರ್‌ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ರೂಪಾ ಅವರು, ರಮೇಶ್‌ ಅವರಿಗೆ ಸಿನಿಮಾ ಮಾಡಲು ಅನುಮತಿ ನೀಡಿದ್ದಾಗಿ ಹೇಳಿದರು. "ಸಿನಿಮಾ ಮಾಡುವುದಾಗಿ ರಮೇಶ್‌ ಅವರು ನನ್ನನ್ನು ಸಂಪರ್ಕಿಸಿದ್ದು ನಿಜ. ನಾನು ಕೂಡಾ ಅನುಮತಿ ಕೊಟ್ಟಿದ್ದೇನೆ' ಎಂದು ರೂಪಾ ಅವರು ಹೇಳುತ್ತಾರೆ.

ಪ್ರಿಯಾಂಕಾ ಉಪೇಂದ್ರ ನಟಿಸಿರುವ "ಸೆಕೆಂಡ್‌ ಹಾಫ್' ಚಿತ್ರ ಮಹಿಳಾ ಪೇದೆಯ ಕುರಿತಾಗಿ ಮಾಡಲಾಗಿದೆ. ಈ ಕುರಿತು ಮಾತನಾಡುವ ರೂಪಾ ಅವರು, "ಸೆಕೆಂಡ್‌ ಹಾಫ್' ಚಿತ್ರದ ಕಥಾಹಂದರ ಚೆನ್ನಾಗಿದೆ. ಮಹಿಳಾ ಪೇದೆಯ ಕುರಿತಾಗಿ ಮಾಡಿದ್ದಾರೆ. ಯಾವುದೇ ಒಂದು ಪ್ರಕರಣದ ಗ್ರೌಂಡ್‌ ವರ್ಕ್‌ ಮಾಡುವಲ್ಲಿ ಪೇದೆಗಳ ಪಾತ್ರ ಪ್ರಮುಖವಾಗಿರುತ್ತದೆ.

ಇಲಾಖೆಯಲ್ಲಿ ಅವರನ್ನು ಮುಂದು ತರಲು, ಅವರಿಗೆ ಆತ್ಮಸ್ಥೈರ್ಯ ತುಂಬಲು ಸಾಕಷ್ಟು ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗ ಪ್ರಿಯಾಂಕಾ ನಟಿಸಿರುವ "ಸೆಕೆಂಡ್‌ ಹಾಫ್' ಸಿನಿಮಾ ಮತ್ತಷ್ಟು ಮಹಿಳೆಯರನ್ನು ಇಲಾಖೆ ಸೇರಲು ಆಕರ್ಷಿಸುತ್ತದೆ ಎಂಬ ವಿಶ್ವಾಸವಿದೆ' ಎಂದರು. 

Trending videos

Back to Top