CONNECT WITH US  

ವಿಜಿ ಮಗನ "ಕುಸ್ತಿ' ಆರಂಭ: Watch

"ದುನಿಯಾ' ವಿಜಯ್‌ ತಮ್ಮ ಮಗ ಸಾಮ್ರಾಟ್‌ನನ್ನು ತಮ್ಮದೇ ಬ್ಯಾನರ್ ನಲ್ಲಿ "ಕುಸ್ತಿ' ಸಿನಿಮಾ ಮೂಲಕ ಲಾಂಚ್‌ ಮಾಡಲು ಹೊರಟಿರೋದು, ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಕೂಡಾ ಬಿಡುಗಡೆಯಾಗಿದ್ದು, "ಚೂರಿಕಟ್ಟೆ' ಸಿನಿಮಾ ನಿರ್ದೇಶಕ ರಾಘು ಶಿವಮೊಗ್ಗ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 

"ಕುಸ್ತಿ' ಚಿತ್ರದಲ್ಲಿ ದುನಿಯಾ ವಿಜಯ್ ಕುಸ್ತಿಪಟುವಾಗಿ ನಟಿಸುತ್ತಿದ್ದು, ಚಿತ್ರದ ಟೀಸರ್ ವಿಜಯ್‌ ಪುತ್ರ ಸಾಮ್ರಾಟ್‌ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ, ಸಾಮ್ರಾಟ್ ಈ ಸಿನಿಮಾದಲ್ಲಿ ಅಪ್ಪನ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಸಾಮ್ರಾಟ್ ಸಾಕಷ್ಟು ವರ್ಕೌಟ್ ಸೇರಿದಂತೆ, ಜಿಮ್ಯಾಸ್ಟಿಕ್, ಕುಸ್ತಿ ತರಬೇತಿ ಪಡೆದುಕೊಂಡಿದ್ದು, ಸಿನಿಮಾಕ್ಕಾಗಿ ಭಾರಿ ಪರಿಶ್ರಮ ವಹಿಸಿದ್ದಾನೆ.

ಇನ್ನೂ ಟೀಸರ್ ಗೆ ಸಿನಿಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿಯವರೆಗೂ 90 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಚಿತ್ರದ ಇತರ ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. 

Trending videos

Back to Top