CONNECT WITH US  

ಅಭಿಷೇಕ್‌ಗೆ ಅಪ್ಪನಾದ ಸ್ಟೈಲಿಶ್‌ ವಿಲನ್‌!

ರೆಬಲ್‌ ಸಾರ್‌ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ "ಅಮರ್' ಚಿತ್ರ ದ ಚಿತ್ರೀಕರಣ ಈಗಾಗಲೇ ಬಿರುಸುನಿಂದ ಸಾಗುತ್ತಿದೆ. ಅಲ್ಲದೇ ಚಿತ್ರದ ಫ‌ಸ್ಟ್‌ಲುಕ್‌ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡು ಮಾಡುತ್ತಿದೆ.

ಚಿತ್ರದಲ್ಲಿ ಅಭಿಷೇಕ್‌ ಬೈಕ್‌ ರೇಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಲವ್‌ಸ್ಟೋರಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಾಗಶೇಖರ್, "ಅಮರ್' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. 

ಇದೀಗ ಚಿತ್ರಕ್ಕೆ ಮತ್ತೂಬ್ಬ ಸ್ಟೈಲಿಶ್‌ ನಟನ ಆಗಮನವಾಗಿದೆ. ಹೌದು! ಅಮರ್‌ ಚಿತ್ರಕ್ಕೆ ಅಭಿಷೇಕ್‌ಗೆ ಅಪ್ಪನಾಗಿ ಕನ್ನಡದ ಖ್ಯಾತ ಸ್ಟೈಲಿಶ್‌ ವಿಲನ್‌ "ರಾಜ್‌ ದೀಪಕ್‌ ಶೆಟ್ಟಿ' ನಟಿಸಲು ರೆಡಿ ಆಗಿದ್ದು, ಈ ಹಿಂದೆ "ಶ್ರೀಕಂಠ', "ಭರ್ಜರಿ', "ಟೈಗರ್‌', "ಅಸತೋಮ ಸದ್ಗಮಯ', "ಪ್ರಯಾಣಿಕ ಗಮನಕ್ಕೆ' ಅಂತಹ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.

ಈಗ ತಂದೆಯಂತಹ ಸವಾಲಿನ ಪಾತ್ರವನ್ನ ಅಮರ್‌ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಬಹುತೇಕ ಯುವನಟರು ಖಡಕ್‌ ಆಗಿ, ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲು ಕಾತುರದಿಂದ ಕಾಯ್ದರೇ, ಇಷ್ಟು ಚಿಕ್ಕ ವಯಸ್ಸಿನಲ್ಲಿ ತಂದೆಯಂತಹ ಪಾತ್ರವನ್ನು ನಿಭಾಯಿಸಲು ಓಕೆ ಎಂದಿದ್ದಾರೆ ರಾಜ್‌ ದೀಪಕ್‌ ಶೆಟ್ಟಿ. ಇನ್ನು ಚಿತ್ರಕ್ಕೆ ತಾನ್ಯ ಹೋಪ ನಾಯಕಿಯಾಗಿದ್ದು, ಸಂದೇಶ್‌ ನಾಗರಾಜ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Trending videos

Back to Top