CONNECT WITH US  

"ಕನ್ನಡ ಕಲಿಯೋ ಮುಂಡೆದೆ' ಅಂದ್ರು ಶಿವಣ್ಣ: Watch

ನಟ ವೈಭವ್ ಕನ್ನಡ ಚಿತ್ರರಂಗಕ್ಕೆ "ತಾರಕಾಸುರ' ಚಿತ್ರದ ಮೂಲಕ ಪರಿಚಯವಾಗುತ್ತಿದ್ದು, ಇದೀಗ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಡಿರುವ "ಕನ್ನಡ ಕಲಿಯೋ.. ಕನ್ನಡ ಕಲಿಯೋ.... ಕಲಿಯೋ ಮುಂಡೆದೆ' ಎಂಬ ಲಿರಿಕಲ್ ಹಾಡನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು  ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಡಿಗೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. 

ಇದು ನಾಯಕನ ಇಂಟ್ರೋಡಕ್ಷನ್‌ ಹಾಡಾಗಿದ್ದು, ಸಾಹಿತ್ಯವನ್ನು ಕವಿರಾಜ್ ಬರೆದಿದ್ದಾರೆ. "ರಥಾವರ' ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ "ತಾರಕಾಸುರ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ವೈಭವ್ ತಂದೆ ನರಸಿಂಹಲೂ ಬಂಡವಾಳ ಹೂಡಿದ್ದಾರೆ. ವೈಭವ್ ಜತೆ ಮಾನ್ವಿತಾ ನಾಯಕಿಯಾಗಿ ಹೆಜ್ಜೆ ಹಾಕಿದ್ದಾರೆ.

ಇನ್ನು ಚಿತ್ರಕ್ಕೆ ಧರ್ಮ ವಿಶ್ ಸಂಗೀತ ಸಂಯೋಜನೆಯಿದ್ದು, ಪ್ರದೀಪ್ ಗೌಡ ಕ್ಯಾಮರಾ ವರ್ಕ್, ಕೆ.ಎಂ.ಪ್ರಕಾಶ್‌ ಸಂಕಲನ, ಡಿಫ‌ರೆಂಟ್‌ ಡ್ಯಾನಿ ಮತ್ತು ಜಾಲಿಬಾಸ್ಟಿನ್‌ ಸಾಹಸ, ಮುರಳಿ ನೃತ್ಯ ನಿರ್ದೇಶನ ಸೇರಿದಂತೆ ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗರಾಜ್‌ ಭಟ್‌, ಚೇತನ್‌ ಕುಮಾರ್‌ ಹಾಗೂ ಹೊಸ ಹುಡುಗ ವಿನಾಯಕ್‌ ಸಾಹಿತ್ಯ ಚಿತ್ರಕ್ಕಿದೆ. ಅಲ್ಲದೇ ತಾರಾಗಣದಲ್ಲಿ ವೈಭವ್‌, ಮಾನ್ವಿತಾ ಹರೀಶ್‌, ಸಾಧು ಕೋಕಿಲ, ಡ್ಯಾನಿ ಸಪಾನಿ, ಕರಿಸುಬ್ಬು, ಎಂ.ಕೆ. ಮಠ ಮುಂತಾದವರು ಇದ್ದಾರೆ. 


Trending videos

Back to Top