"ತಾಯಿಗೆ ತಕ್ಕ ಮಗ'ನಿಗೆ ಚಂದನ್ಶೆಟ್ಟಿ ಧ್ವನಿ: Watch

ಶಶಾಂಕ್ ನಿರ್ದೇಶನದ "ತಾಯಿಗೆ ತಕ್ಕ ಮಗ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡ್ತಿದೆ. ಇದೀಗ ಚಿತ್ರತಂಡ ಚಿತ್ರದ "ಸೈಡು ಬಿಡು ಮಗಾ.. ಸೆಲ್ಯೂಟ್ ಹೊಡಿ ಮಗಾ....' ಎಂಬ ಟೈಟಲ್ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದು, ಹಾಡಿಗೆ ಸಿನಿರಸಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಹಾಡು ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ.
ಕನ್ನಡ ರ್ಯಾಪರ್ ಚಂದನ್ಶೆಟ್ಟಿ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡಿಗೆ ಸಾಹಿತ್ಯವನ್ನು ಶಶಾಂಕ್ ಬರೆದಿದ್ದಾರೆ. ಇನ್ನು ಮಾಸ್ ಲುಕ್ನಲ್ಲಿ ಅಜೇಯ್ ರಾವ್ ಮಿಂಚಿದ್ದು, ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ "ತಾಯಿಗೆ ತಕ್ಕ ಮಗ' ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ. ಚಿತ್ರವು ಎರಡು ಟ್ರ್ಯಾಕ್ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್ ಒಂದು ಕಡೆಯಾದರೆ, ಹೀರೋ ಲವ್ ಎಪಿಸೋಡ್ ಇನ್ನೊಂದು ಕಡೆ ಸಾಗುತ್ತದೆಯಂತೆ.
"ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೊಂದು ಕಥೆ ಇದೆ. ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ'ಯಲ್ಲಿ ಕಥೆ ಸಾಗುತ್ತದೆ. ಚಿತ್ರದಲ್ಲಿ ಅಜೇಯ್ ರಾವ್ ಎದುರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು, ಸುಮಲತಾ ಅಂಬರೀಶ್ ತಾಯಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶಶಾಂಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೇ ಚಿತ್ರಕ್ಕೆ ಕಿಚ್ಚ ಸುದೀಪ ಧ್ವನಿ ನೀಡಿದ್ದು, ಈ ಮೂಲಕ ಅಜೇಯ್ ರಾವ್ ಸಿನಿಮಾಕ್ಕೆ ಸುದೀಪ್ ಸಾಥ್ ನೀಡಿದ್ದಾರೆ.