CONNECT WITH US  

ವೀರಾಧಿವೀರನ ಪ್ರೇಮಗೀತೆ

ಹಳೆ ಟೈಟಲ್‌ ಹೊಸ ಸಿನಿಮಾ

ಹಳೆಯ ಯಶಸ್ವಿ ಸಿನಿಮಾಗಳ ಶೀರ್ಷಿಕೆಗಳನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಅನೇಕ ಸಿನಿಮಾಗಳು ಸೆಟ್ಟೇರಿದ್ದು, ಈಗ ಅದಕ್ಕೆ ಹೊಸ ಸೇರ್ಪಡೆ "ವೀರಾಧಿವೀರ'.  ವಿಷ್ಣುವರ್ಧನ್‌ ಅವರು ನಟಿಸಿದ "ವೀರಾಧಿವೀರ' ಚಿತ್ರದ ಟೈಟಲ್‌ ಇಟ್ಟುಕೊಂಡು ಈಗ ಹೊಸಬರ ಸಿನಿಮಾ ಸೆಟ್ಟೇರಿದೆ. ಎಲ್ಲಾ ಓಕೆ, ಈ ಸಿನಿಮಾಕ್ಕೆ "ವೀರಾಧಿವೀರ' ಎಂದು ಟೈಟಲ್‌ ಇಡಲು ಕಾರಣವೇನೆಂದು ನೀವು ಕೇಳಬಹುದು. ಅದಕ್ಕೆ ಕಾರಣ ಅಭಿಮಾನ.

ಚಿತ್ರದ ನಿರ್ಮಾಪಕ ಮತ್ತು ನಾಯಕ ವಿಷ್ಣುವರ್ಧನ್‌ ಅವರ ಅಭಿಮಾನಿಯಾಗಿದ್ದರಿಂದ ಚಿತ್ರಕ್ಕೆ ಈ ಹೆಸರು ಇಡಲಾಗಿದೆಯಂತೆ. ಅಂದಹಾಗೆ, ಇದೊಂದು ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಆರಂಭದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿರುವ ನಾಯಕನ ಹೃದಯವನ್ನೇ ನಾಯಕಿ ಕದ್ದು ಬಿಡುತ್ತಾಳಂತೆ. ಆ ನಂತರ ಆಕೆಯನ್ನು ಉಳಿಸಿಕೊಳ್ಳಲು ನಾಯಕ ಏನೆಲ್ಲಾ ಕಸರತ್ತು ಮಾಡುತ್ತಾನೆ ಹಾಗೂ ಆ ನಂತರ ಏನಾಗುತ್ತಾನೆ ಎಂಬುದೇ ಸಿನಿಮಾದ ಹೈಲೈಟ್‌ ಎಂಬುದು ಚಿತ್ರತಂಡದ ಮಾತು.

ಚಿತ್ರದಲ್ಲಿ ಶಿವು ನಾಯಕರಾಗಿ ನಟಿಸಿದ್ದಾರೆ. ಇಲ್ಲಿ ಅವರಿಗೆ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಅಶ್ವಿ‌ನಿ ನಾಯಕಿಯಾಗಿ ನಟಿಸಿದ್ದಾರೆ. ಸತ್ಯ ಸಾಮ್ರಾಟ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಎರಡು ಚಿತ್ರಗಳನ್ನು ನಿರ್ದೇಶಿಸಿದ ಅನುಭವದೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಕರಣ್‌ ಮಹದೇವ ಸಂಗೀತವಿದೆ.  ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಜಯಾನಂದ.ಪಿ ಈ ಚಿತ್ರದ ನಿರ್ಮಾಪಕರು. ಜೊತೆಗೆ  ನಾಯಕಿ ತಂದೆಯಾಗಿ ಮುಖ್ಯ ಖಳನಾಯಕನ ಪಾತ್ರದಲ್ಲೂ ನಟಿಸಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.

Trending videos

Back to Top