CONNECT WITH US  

ಚಿರಂಜೀವಿ ಸರ್ಜಾ ಹೊಸ ಚಿತ್ರ "ಖಾಕಿ'

ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದಾರೆ ಎಂದು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆಗ ಚಿತ್ರಕ್ಕಿನ್ನು ನಾಮಕರಣ ಮಾಡಿರಲಿಲ್ಲ. ಈಗ ನಿರ್ಮಾಪಕರು ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಮಾಡಿದ್ದಾರೆ. ಆ ಚಿತ್ರಕ್ಕೆ "ಖಾಕಿ' ಎಂಬ ಹೆಸರಿಟ್ಟಿದ್ದಾರೆ. "ದಿ ಪವರ್‌ ಆಫ್ ಕಾಮನ್‌ ಮ್ಯಾನ್‌' ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ಪೊಲೀಸ್‌ ಅಧಿಕಾರಿಯ ಕಥೆ ಇರಬಹುದಾ ಎಂಬ ಪ್ರಶ್ನೆಯೂ ಎದುರಾಗುತ್ತೆ.

ಆದರೆ, ಇಲ್ಲಿ ಏನೆಲ್ಲಾ ಇದೆ ಎಂಬುದಕ್ಕೆ ಚಿತ್ರ ಬರುವವರೆಗೂ ಕಾಯಲೇಬೇಕು. ಇನ್ನು, ನವೀನ್‌ ರೆಡ್ಡಿ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ, ಅನುಭವ ಇಲ್ಲವೆಂದಲ್ಲ, ಈ ಹಿಂದೆ ತರುಣ್‌ ಶಿವಪ್ಪ ನಿರ್ಮಾಣದ "ಮಾಸ್‌ ಲೀಡರ್‌', "ರೋಜ್‌' ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಿಂದೆ ಗಣೇಶ್‌ ಅಭಿನಯದ "ಸಂಗಮ' ಮತ್ತು "ಕೂಲ್‌' ಚಿತ್ರದಲ್ಲೂ ಕೆಲಸ ಮಾಡಿದ ಅನುಭವದ ಮೇಲೆ ಚಿರಂಜೀವಿ ಸರ್ಜಾ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಅಂದಹಾಗೆ, ಇದೊಂದು ಕಾಮನ್‌ ಮ್ಯಾನ್‌ ಕಥೆ. ಪ್ರತಿಯೊಬ್ಬರೂ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬಹುದು ಎಂಬ ಅಂಶ ಚಿತ್ರದ ಹೈಲೈಟ್‌. ಇಲ್ಲೊಂದು ಕೇಬಲ್‌ ಕಥೆ ಕೂಡ ಸಾಗಲಿದೆ. ಯೂಥ್‌ಗೆ ಸ್ಫೂರ್ತಿಯಾಗುವಂತಹ ಕಥೆ ಇಲ್ಲಿದೆ. ಇಲ್ಲೂ ಕೂಡ ಪ್ರೀತಿ, ಸೆಂಟಿಮೆಂಟ್‌, ಗೆಳೆತನ ಇತ್ಯಾದಿ ವಿಷಯಗಳು ಇರಲಿವೆ. ವಿದ್ಯಾದರ್‌ ಕಥೆ ಬರೆದಿದ್ದಾರೆ.

ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರಕ್ಕೆ ಬಾಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಇವರಿಗೆ ಕನ್ನಡದ ಮೊದಲ ಚಿತ್ರವಿದು.  ಋತ್ವಿಕ್‌ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಪೀಟರ್‌ಹೇನ್‌, ರವಿವರ್ಮ, ವಿನೋದ್‌ ಅವರ ಸಾಹಸವಿದೆ. ಸುಮಾರು 60 ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂಬುದು ಚಿತ್ರತಂಡದ ಮಾತು.


Trending videos

Back to Top