CONNECT WITH US  

ನಲಪಾಡ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಬೆಂಗಳೂರು: ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ಗೆ ವಿಧಿಸಿದ್ದ ನ್ಯಾಯಾಂಗ ಬಂಧನ ಅವಧಿಯನವ್ನು ಎಸಿಎಂಎಂ ನ್ಯಾಯಾಲಯ ಏ. 17ರವರೆಗೆ ವಿಸ್ತರಿಸಿದೆ. ಮೊಹಮ್ಮದ್‌ ನಲಪಾಡ್‌ ಮತ್ತಿತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಾಲಯ ಏ.17ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದೆ. ಮೊಹಮ್ಮದ್‌ ನಲಪಾಡ್‌ ಮತ್ತಿತರ ಆರೋಪಿಗಳು ಕಾಲು ತಗುಲಿದ ವಿಚಾರಕ್ಕೆ ಫೆ. 18ರಂದು ವಿದ್ವತ್‌ ಮೇಲೆ ಜಗಳ ತೆಗೆದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.


Trending videos

Back to Top