CONNECT WITH US  

ಕಾರು, ಬೈಕ್‌ ಕಳವು ಆರೋಪಿಗಳ ಬಂಧನ

ಬೆಂಗಳೂರು: ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರು ಹಾಗೂ ಬೈಕ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರಿನಗರದ ಸುನೀಲ್‌ ಕುಮಾರ್‌,  ಹರಿಪ್ರಸಾದ್‌, ರಾಜಶೇಖರ್‌ ಬಂಧಿತರು.

ಹಲವು ವರ್ಷಗಳಿಂದ ಸ್ನೇಹಿತರಾಗಿರುವ ಆರೋಪಿಗಳು ಮೋಜಿನ ಜೀವನ ನಡೆಸುವ ಸಲುವಾಗಿ ಕೆಂಗೇರಿ ಬಳಿ  ರಾತ್ರಿ ಹೊತ್ತು ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರು,ಬೈಕ್‌, ಕಾರಿನ ಟೈರ್‌ಗಳನ್ನು ಕಳವು ಮಾಡಿ ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಈ ಬಗ್ಗೆ ದಾಖಲಾದ ದೂರುಗಳ ಸಂಬಂಧ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, 6 ಲಕ್ಷ ರೂ.ಮೌಲ್ಯದ 2 ಮಾರುತಿ 800 ಕಾರು, 4 ದ್ವಿಚಕ್ರ ವಾಹನ ಮತ್ತು 8 ಕಾರಿನ ಚಕ್ರಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

Trending videos

Back to Top