CONNECT WITH US  

ಕಲಾವಿದರಿಗೆ ಬೆಲೆ ಕಟ್ಟಲಾಗದು

ನೆಲಮಂಗಲ: ಸಮಾಜದಲ್ಲಿ ಜಾಗೃತಿ ಮೂಡಿಸಿ ಜನಮನ್ನಣೆ ಪಡೆಯುವ ಚಿತ್ರಕಲೆಗಳ ರಚನೆಗೆ ಪ್ರತಿಯೊಬ್ಬ ಕಲಾವಿದ ಪಡುವ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಚಿತ್ರಕಲಾ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಪ್ಪಾ ಸಾಹೇಬ್‌ ಗಾಣಿಗೇರ್‌ ತಿಳಿಸಿದರು. ಪಟ್ಟಣದ ಗಾರ್ಡನ್‌ಕಾಂಪ್ಲೆಕ್ಸ್‌ ಸಭಾಂಗಣದಲ್ಲಿ ಲಕ್ಷಣ್‌.ಎ.ಗಾಣಿಗೇರ್‌ ನಿರ್ದೇಶನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಮೂಹ ಚಿತ್ರಕಲಾ ಪ್ರದರ್ಶನ ಸಮಾರೋಪದಲ್ಲಿ ಮಾತನಾಡಿದರು.

ಪ್ರಕೃತಿಯ ಸಹಜತೆಯಿಂದ ಮೂಡುವ ಸುಂದರ ಕ್ಷಣಗಳನ್ನು ನೊಡಲು ಪ್ರತಿಯೊಬ್ಬರಿಗೂ ಆಶ್ಚರ್ಯದ ಜೊತೆ ರೋಮಾಂಚನವಾಗುತ್ತದೆ. ಅಂತಹ ಸನ್ನಿವೇಶಗಳನ್ನು ಚಿತ್ರಕಲೆ ಮೂಲಕ ರಚಿಸಿ ಕಲಾರಸಿಕರನ್ನು ಮತ್ತೂಮ್ಮೆ ರೋಮಾಂಚಿಸಲು ಸಾಧ್ಯವಾಗುವುದು ಕಲಾವಿದನಿಂದ ಮಾತ್ರ ಸಾಧ್ಯ, ಅಂತಹ ಕಲಾವಿದರನ್ನು ಸಮಾಜದಲ್ಲಿ ಗುರುತಿಸುವ ಕಾರ್ಯ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಸಾಧ್ಯವಾಗಬೇಕು ಎಂದರು.

ಸಾಹಿತಿ ವೆಂಕಟೇಶ್‌.ಆರ್‌.ಚೌಥಾಯಿ, ಚಿತ್ರ ಕಲಾವಿದರು ಸಮಾಜದಲ್ಲಿನ ಮೊದಲ ಶ್ರೀಮಂತರು. ಕಲಾವಿದರ ಪರಿಶ್ರಮದಿಂದ ಚಿತ್ರ ಸರಸ್ವತಿ ಮೈದುಂಬಿ ಭಾವನೆ ಮೂಡಿಸುವ ಕಲಾಕೃತಿಗಳ ರಚನೆ ಶಕ್ತಿ ನೀಡಿರುವುದು ಇವರಿಗೆ ಮಾತ್ರ.

ಕಲಾವಿದ ರಚಿಸಿದ ಕಲಾಕೃತಿಗಳಿಗೆ ಮಾರುಕಟ್ಟೆಯಲ್ಲಿ ಒಂದು ಚಿತ್ರಕಲೆಗೆ ಲಕ್ಷದಿಂದ ಕೋಟಿಯವರೆಗೆ ಬೆಲೆ ಇದೆ. ಹೀಗಾಗಿ ಪೋಷಕರು ಭಯಬಿಟ್ಟು ಮಕ್ಕಳನ್ನು ಪ್ರೋತ್ಸಾಹಿಸಿ ಮಕ್ಕಳನ್ನು ಉತ್ತಮ ಚಿತ್ರಕಲಾವಿದನನ್ನಾಗಿ ಮಾಡಿ ಎಂದರು.

ಪ್ರದರ್ಶನ: ಮಕ್ಕಳ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳ ನೂರಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ನಡೆಯಿತು. ನಿವೃತ್ತ ರಾಜಸ್ವ ನಿರೀಕ್ಷಕ ಮುನಿರತ್ನಾಚಾರ್‌, ಕಲಾವಿದ ಮಂಜುನಾಥ್‌ ಪ್ರಭು, ಸಾಹಿತಿ ಮಾರುತಿ, ಶೋಭಾರಾಣಿ, ಚಂದ್ರಶೇಖರ್‌,ಅನುಪಮಾ ಇದ್ದರು.


Trending videos

Back to Top