CONNECT WITH US  

2 ಲಕ್ಷ ರೂ. ಹಣದ ಬ್ಯಾಗ್‌ ಕಳವು

ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿನ ಎಸ್‌ಬಿಐ ಬ್ಯಾಂಕಿನಲ್ಲಿ 10 ಲಕ್ಷ ರೂ. ಡ್ರಾ ಮಾಡಿಕೊಂಡು ಹೊರ ಬಂದು ಬೈಕ್‌ನಲ್ಲಿ ಕುಳಿತುಕೊಳ್ಳಲು ಮುಂದಾದ ರಾಮಸ್ವಾಮಿ ಎಂಬುವವರಿಂದ ಅಪರಿಚತರು ಕೈ ಚೀಲದಲ್ಲಿದ್ದ 2 ಲಕ್ಷ ರೂ. ಕಸಿದು ಪರಾರಿಯಾಗಿರುವ ಪ್ರಕರಣ ಮಂಗಳವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಗುಂಡಮಗೆರೆಯ ಕಲ್ಪತರು ಗ್ರಾಮೀಣ ಬ್ಯಾಂಕಿನ ಕ್ಯಾಷಿಯರ್‌ ರಾಮಸ್ವಾಮಿ 10 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದರು. ಒಂದು ಬ್ಯಾಗಿನಲ್ಲಿ 8 ಲಕ್ಷ, ಮತ್ತೂಂದು ಬ್ಯಾಗಿನಲ್ಲಿ 2ಲಕ್ಷ ರೂ. ಗಳನ್ನು ಇಟ್ಟುಕೊಂಡು ಜೊತೆಯಲ್ಲಿ ಬಂದಿದ್ದವರೊಂದಿಗೆ

ಬೈಕ್‌ನಲ್ಲಿಹೋಗಲು ಮುಂದಾಗುತ್ತಿದ್ದಂತೆ ಇಬ್ಬರು ಅಪರಿಚಿತರು ಬ್ಯಾಗ್‌ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ದೋಚಿ ಪರಾರಿಯಾದ ಯುವಕರು ರಘುನಾಥಪುರ ಸಮೀಪ ಬೈಕ್‌ ಬಿಟ್ಟು ಹೋಗಿ ಪರಾರಿಯಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Trending videos

Back to Top