CONNECT WITH US  

ಶಾರದಾ ಯೋಗಶಾಲೆ ವಿದ್ಯಾರ್ಥಿ ಶ್ರೀಕಲ್ಪಾ ಚಾಂಪಿಯನ್‌

ನೆಲಮಂಗಲ: ತಮಿಳುನಾಡಿನ ಚೆನ್ನೈನಲ್ಲಿ  ಆ.26ರಂದು ನಡೆದ ಅಖೀಲ ಭಾರತ ಅಂತಾರಾಜ್ಯ ಯೋಗ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀಶಾರದಾ ಯೋಗಾ ಶಾಲಾ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದು ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ಪಟ್ಟಣದ ವಾಜರಹಳ್ಳಿ ವಿಶ್ವಶಾಂತಿ ನಗರದ ಶ್ರೀಶಾರದಾ ಯೋಗ ತರಬೇತಿ ಶಾಲೆಯ ಕುಮಾರಿ ಶ್ರೀಕಲ್ಪಾ  8 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಚಾಂಪಿಯನ್‌ ಆಫ್ ಚಾಂಪಿಯನ್‌ ಆಗಿ ಹೊರಹೊಮ್ಮಿ ಯೋಗಾರ್ಜುನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

6 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಶಾಲೆಯ ಗುಣದಿತ್‌ ಪ್ರಥಮ ಸ್ಥಾನ ಹಾಗೂ ಯಶವಂತ್‌ಗೌಡ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿ ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಶ್ರಮಿಸಿದ ಯೋಗ ಶಿಕ್ಷಕ ಶ್ರೀಧರ್‌ ಆರ್‌. ಅವರನ್ನು ಪತಂಜಲಿ ಕಾಲೇಜ್‌ ಆಫ್ ಯೋಗ ಅಂಡ್‌ ರೀಸರ್ಚ್‌ ಸೆಂಟರ್‌ ವತಿಯಿಂದ ಯೋಗ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.


Trending videos

Back to Top