CONNECT WITH US  

ಹೆಣ್ಣು ಹುಟ್ಟಲಿಲ್ಲ ಎಂದು ಗಂಡು ಮಗುವನ್ನೇ ಕೊಂದ ತಾಯಿ!

ಗಂಡು ಮಗು ಹುಟ್ಟಲಿ ಎಂದು ಬಯಸುವವರೇ ಜಾಸ್ತಿ. ಅಂಥದ್ದರಲ್ಲಿ ಇಲ್ಲಿನ ಮಹಾತಾಯಿಯೊಬ್ಬಳು, ತನಗೆ ಹೆಣ್ಣು ಮಗು ಹುಟ್ಟಲಿಲ್ಲ ಎಂದು ಬೇಸತ್ತು ಇನ್ನೂ ತಿಂಗಳು ತುಂಬದ ಗಂಡುಮಗುವನ್ನು ಹತ್ಯೆ ಮಾಡಿದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ. ಪೂರ್ಣಿಮಾ ಎಂಬಾಕೆಗೆ ಮೊದಲ ಮಗು ಗಂಡಾಗಿತ್ತು, ಆದರೆ ಜನನದ ವೇಳೆಯೇ ಅದು ಸಾವನ್ನಪ್ಪಿತ್ತು. ಬಳಿಕ ಹುಟ್ಟಿದ ಎರಡನೇ ಮಗು ಕೂಡಾ ಗಂಡಾಗಿತ್ತು.

ಹೀಗಾಗಿ ಮೂರನೆಯದ್ದಾದರೂ ಹೆಣ್ಣಾಗಲಿ ಎಂಬುದು ಆಕೆಯ ಕನಸಾಗಿತ್ತು. ಆದರೆ ಮೂರು ವಾರದ ಹಿಂದೆ ಆಕೆಗೆ ಹೆರಿಗೆಯಾದಾಗ ಮತ್ತೆ ಗಂಡು ಮಗು ಹುಟ್ಟಿತ್ತು. ಇದರಿಂದ ಬೇಸರಗೊಂಡಿದ್ದ ಆಕೆ ಮಗುವನ್ನು ಯಾರಿಗಾದರೂ ಕೊಡಲು ಬಯಸಿದ್ದಳು. ಆದರೆ ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದಾಗ ಬ್ಲೇಡ್‌ನಿಂದ ಮಗುವಿನ ಕತ್ತನ್ನೇ ಕತ್ತರಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ಯಾರೋ ಸರಗಳ್ಳರು ಈ ಕೃತ್ಯವೆಸಗಿದ್ದಾರೆ ಎಂದು ಮನೆಯಲ್ಲಿ ಹೇಳಿದ್ದಾಳೆ. ಆದರೆ ಅನುಮಾನಗೊಂಡ ಮನೆಯವರು ವಿಚಾರಣೆ ನಡೆಸಿದಾಗ, ಮಗುವನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

Trending videos

Back to Top