CONNECT WITH US  

ಹಫ್ತಾ ಕೊಟ್ಟು ತನ್ನನ್ನೇ ತಾನು ಹತ್ಯೆಮಾಡಿಸಿಕೊಂಡ!

ತೀರದ ದ್ವೇಷಕ್ಕಾಗಿ ಕೊಲೆಗಾರರಿಗೆ ಹಫ್ತಾ ಕೊಟ್ಟು ಕೊಲ್ಲಿ ಸುವ ವಿದ್ಯಮಾನಗಳು ಇವೆ. ಆದರೆ ತನ್ನನ್ನೇ ಕೊಲ್ಲಿಸಲು ವ್ಯಕ್ತಿ ಹಫ್ತಾ ಕೊಟ್ಟಿದ್ದೂ ಅಲ್ಲದೇ ಕೊಲೆಯಾಗುತ್ತಾನೆ ಅಂದ್ರೆ! ನಂಬಲೇ ಬೇಕು.ಇಂತಹದ್ದೊಂದು ವಿಚಿತ್ರ ಘಟನೆ ಹರಿಯಾಣಾದ ಸೋನಿಪತ್‌ ನಲ್ಲಿ ನಡೆದಿದೆ. ಸತ್ಬೀರ್‌ ಸಿಂಗ್‌ ಎಂಬಾತ 60 ಲಕ್ಷ ರೂ. ಸಾಲ ಮಾಡಿದ್ದು, ಕಟ್ಟಲು ಸಾಧ್ಯವೇ ಆಗಿರಲಿಲ್ಲ. ಕೊನೆಗೆ ಆತ ತನ್ನನ್ನು ಕೊಲೆ ಮಾಡುವಂತೆ ಕೊಲೆಗಾರನಿಗೆ 2500 ರೂ. ಹಫ್ತಾ ಕೊಟ್ಟು ಕೊಲೆಯಾಗಿಯೂ ಹೋಗಿದ್ದಾನೆ. ಸತ್ತ ಮೇಲೆ ವಿಮಾ ಹಣ ಕುಟುಂಬದವರಿಗೆ ಬರುತ್ತದೆ ಎಂಬುದು ಸಿಂಗ್‌ ಲೆಕ್ಕಾಚಾರವಾಗಿತ್ತು. ಅಚ್ಚರಿ ಅಂದ್ರೆ ಈ ವಿಷ್ಯ ಗೊತ್ತಾಗಿದ್ದು, ಕೊಲೆಗಾರನ್ನು ಪೊಲೀಸ್ರು ಬಂಧಿಸಿದಾಗ. ಕಥೆ ಕೇಳಿ ಪೊಲೀಸರಿಗೆ ತಲೆತಿರುಗಿದ್ಯಂತೆ. ಇದೀಗ ಹೆಚ್ಚಿನ ತನಿಖೆ ಸಾಗಿದೆ!

Trending videos

Back to Top