ಈತ ನೀಡಿದ ಜೀವನಾಂಶ 890 ಕೆ.ಜಿ. ತೂಕವಿತ್ತು!

PHOTO: THE JAKARTA POST/ASIA NEWS NETWORK
ತನ್ನ ಪರಿತ್ಯಕ್ತ ಹೆಂಡತಿಗೆ ನೀಡಬೇಕಿದ್ದ ಜೀವನಾಂಶ ಮೊತ್ತದ ಬಾಕಿ ಹಣವನ್ನು ಇಂಡೊನೇಷ್ಯಾದ ವ್ಯಕ್ತಿಯೊಬ್ಬ ಕಡೆಗೂ ನೀಡಿದ್ದಾನೆ. ಈತ ಬಾಕಿ ಪಾವತಿ ಮಾಡುತ್ತಿದ್ದಂತೆ ಅದು ದೇಶದಾದ್ಯಂತ ಸುದ್ದಿಯಾಗಿದೆ. ಏಕೆ ಗೊತ್ತಾ? ದ್ವಿಸುಸಿಲಾರೊ¤ ಎಂಬ ವ್ಯಕ್ತಿಗೆ ನ್ಯಾಯಾಲಯವು 7,33,586 ರೂ.ಗಳನ್ನು ಮಾಜಿ ಪತ್ನಿಗೆ ನೀಡಬೇಕೆಂದು ಆದೇಶಿಸಿತು.
ಅದರಂತೆ ಆತ ತನ್ನ ಹೆಂಡತಿಗೆ ಜೀವನಾಂಶದ ಹಣ ತಲುಪಿಸಿದ. ಅಚ್ಚರಿಯೆಂದರೆ, ಆ "ಜೀವನಾಂಶ'ವು ಬರೋಬ್ಬರಿ 890 ಕೆ.ಜಿ. ತೂಕವಿತ್ತು. ಏಕೆಂದರೆ ಆತ ಈ 7.33 ಲಕ್ಷ ರೂ.ಗಳನ್ನು ನಾಣ್ಯದ ರೂಪದಲ್ಲಿ ಪತ್ನಿಗೆ ಕೊಟ್ಟಿದ್ದ. ಅದನ್ನು ಸಾಗಿಸಲು ಒಂದು ತಳ್ಳು ಗಾಡಿ ಮತ್ತು ಮೂವರು ಸ್ನೇಹಿತರ ಸಹಾಯ ಪಡೆದಿದ್ದ. ಇದನ್ನು ನೋಡುತ್ತಲೇ ಕೆಂಡಾಮಂಡಲಗೊಂಡ ಆತನ ಮಾಜಿ ಪತ್ನಿ, ಆತ ನನಗೆ ಅವಮಾನ ಮಾಡಲೆಂದೇ ಚಿಲ್ಲರೆಗಳನ್ನು ಕಳುಹಿಸಿದ್ದಾನೆ ಎಂದು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ನನಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ. ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಹೀಗಾಗಿ ಸ್ನೇಹಿತರಿಂದ ಸಂಗ್ರಹಿಸಿದೆ ಎಂದಿದ್ದಾನೆ ಸುಸಿಲಾರೋ¤. ಆದರೆ ಸ್ನೇಹಿತರೆಲ್ಲರೂ ನಾಣ್ಯಗಳನ್ನೇ ನೀಡಿದರೇ ಎಂಬುದೇ ಪ್ರಶ್ನೆ