ವಿದ್ಯಾರ್ಥಿ ಬದಲು ಅಮಿತಾಭ್ ಫೋಟೋ

ಇತ್ತೀಚೆಗಷ್ಟೇ ಉತ್ತರಪ್ರದೇಶದ ದುರ್ಗಾವತಿ ಎಂಬ ಮಹಿಳೆಯ ಮತದಾನ ಗುರುತಿನ ಚೀಟಿಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಚಿತ್ರ ಅಚ್ಚಾಗಿದ್ದ ಸುದ್ದಿ ಓದಿದ್ದೀರಿ. ಉತ್ತರ ಪ್ರದೇಶದಲ್ಲಿ ಅಂಥದ್ದೇ ಮತ್ತೂಂದು ಅಚಾತುರ್ಯ ನಡೆದಿದೆ.
ಇಲ್ಲಿಯ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿವಿಯಲ್ಲಿಯ ಬಿಎಡ್ ವಿದ್ಯಾರ್ಥಿಗೆ ನೀಡಲಾಗಿರುವ ಪರೀಕ್ಷೆ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿ ಭಾವಚಿತ್ರದ ಬದಲಾಗಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಚಿತ್ರ ಅಚ್ಚಾಗಿದೆ. ಆದರೂ, ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಆತ ವ್ಯಾಸಂಗ ಮಾಡುತ್ತಿರುವ ರವೀಂದ್ರ ಸಿಂಗ್ ಸ್ಮಾರಕ್ ಮಹಾವಿದ್ಯಾಲಯ ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.ಇಂಟರ್ನೆಟ್ ಸಿಬ್ಬಂದಿ ಅಥವಾ ವಿದ್ಯಾರ್ಥಿಯಿಂದ ಈ ಪ್ರಮಾದವಾಗಿರಬಹುದು ಎಂದು ಹೇಳಿದೆ.