ವೃದ್ಧರ ಕಿವಿಯಲ್ಲಿ ಬಲೆ ಕಟ್ಟಿ ವಾಸಿಸಿದ್ದ ಜೇಡ

ನಮ್ಮ ಕಿವಿಗಳಿಗೆ ಕೀಟಗಳು ಹೋದರೆ ಅದನ್ನು ವೈದ್ಯರು ಪ್ರಯಾಸಪಟ್ಟು ತೆಗೆಯುವ ಸುದ್ದಿಯನ್ನು ಆಗಾಗ ಓದುತ್ತಿರುತ್ತೀರಿ. ಅಂಥಹದ್ದೇ ಸಾಲಿಗೆ ಸೇರಿದ ಸುದ್ದಿಯೊಂದು ಇಲ್ಲಿದೆ. ಆದರೆ ನೀವು ಓದಿರುವ ಸುದ್ದಿಗಳಿಗಿಂತ ಇದು ಸ್ವಲ್ಪ ಭಯಾನಕವಾಗಿದೆ. ಚೀನಾದಲ್ಲಿ 60 ವರ್ಷದ ವೃದ್ಧರೊಬ್ಬರಿಗೆ ತಮ್ಮ ಕಿವಿಯಲ್ಲಿ ತಮಟೆ, ಡೋಲು ಬಡಿದ ಸದ್ದು ಕೇಳುತ್ತಿತ್ತು. ಇದರಿಂದಾಗಿ ಅವರಿಗೆ ನಿದ್ರೆ ಮಾಡಲೂ ಆಗುತ್ತಿರಲಿಲ್ಲವಂತೆ. ಕಡೆಗೊಂದು ದಿನ ಈ ತಾಪತ್ರಯದಿಂದ ಮುಕ್ತಿ ಪಡೆಯಲು ವೈದ್ಯರ ಬಳಿ ಹೋದರು.
ವೈದ್ಯರು ಅವರ ಕಿವಿಯನ್ನು ಎಂಡೊಸ್ಕೋಪ್ ಮೂಲಕ ಪರೀಕ್ಷಿಸಿದಾಗ ಕಿವಿಯಲ್ಲಿ ಜೇಡರ ಬಲೆಯಂಥ ವಸ್ತು ಇರುವುದು ವೈದ್ಯರ ಗಮನಕ್ಕೆ ಬಂದಿತು. ಮತ್ತಷ್ಟು ಪರೀಕ್ಷೆ ಮಾಡಿದಾಗ ಅವರಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲವಂತೆ. ಅದು ಬಲೆಯಂಥ ವಸ್ತುವಲ್ಲ ಬದಲಾಗಿ ಜೇಡರ ಬಲೆಯೇ ಎಂದು ವೈದ್ಯರಿಗೆ ದೃಢವಾಯಿತಂತೆ. ಕಿವಿಯ 2 ಇಂಚಿನ ಆಳದಲ್ಲಿ ಜೇಡ ಇತ್ತಂತೆ. ಕಿವಿಯನ್ನೇ ಮನೆಯಾಗಿಸಿಕೊಂಡಿದ್ದ ಇದು ಬಲೆಯನ್ನೂ ಹೆಣೆದಿತ್ತು. ಅದೃಷ್ಟವಶಾತ್ ವೃದ್ಧರ ಕಿವಿಗೆ ಯಾವುದೇ ರೀತಿಯ ಗಾಯಗಳೂ ಆಗಿರಲಿಲ್ಲ