CONNECT WITH US  

ಮಳೆ ನಿಂತ ಮೇಲೆ ಪರಿಹಾರಕ್ಕೆ ಕ್ರಮ

ಕೊಳ್ಳೇಗಾಲ: ತಾಲೂಕಿನ ನದಿತೀರದಲ್ಲಿ ಪ್ರವಾಹ ನುಗ್ಗಿ ಮನೆ ಮತ್ತು ಜಮೀನು ಜಲಾವೃತಗೊಂಡಿರುವ ಗ್ರಾಮಗಳಿಗೆ ಶುಕ್ರವಾರ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಮುಳ್ಳೂರು, ಹಳೇಹಂಪಾಪುರ, ದಾಸನಪುರ, ಹರಳೆ, ಹಳೇಅಣಗಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು, ಗ್ರಾಮಸ್ಥರು ಸರ್ಕಾರದ ಸೂಚನೆ ಪಾಲಿಸುವಂತೆ ಧೈರ್ಯ ತುಂಬಿದರು.

ಸಂತ್ರಸ್ತರು ಸರ್ಕಾರದ ಸೂಚನೆ ಮೇರೆಗೆ ಮಳೆ ಇಳಿಮುಖವಾಗುವವರೆಗೂ ಸುರಕ್ಷಿತ ಸ್ಥಳಗಳಲ್ಲಿಯೇ ನೆಲೆಸಬೇಕು. ಬಳಿಕ ಪ್ರವಾಹ ನಷ್ಟವನ್ನು ಅಧಿಕಾರಿಗಳು ವರದಿ ತಯಾರಿಸಿಕೊಟ್ಟ ಬಳಿಕ ಪರಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಆತಂಕ್ಕೆ ಒಳಗಾಗಬಾರದು ಎಂದು ಹೇಳಿದರು. 

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಹೊಸಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ ಸಚಿವರು, ಗ್ರಾಮಸ್ಥರಿಗೆ ಪ್ರವಾಹದಿಂದ ಯಾವುದೇ ರೀತಿಯ ತೊಂದರೆ ಎದುರಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಕಾವಲು ಕಾಯುತ್ತಿದ್ದಾರೆ ಎಂದು ಸಾಂತ್ವನ ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾವೇರಿ, ಉಪ ವಿಭಾಗಾಧಿಕಾರಿ ಫೌಜೀಯಾ ತರನ್ನುಮ್‌, ಇಒ ಉಮೇಶ್‌, ತಹಶೀಲ್ದಾರ್‌, ಚಂದ್ರಮೌಳಿ, ಲೋಕೋಪಯೋಗಿ ಇಲಾಖೆಯ ಎಇಇ ಮಹದೇವಸ್ವಾಮಿ, ಡಿಎಸ್ಪಿ ಪುಟ್ಟಮಾದಯ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಇಂದು ಹೆಚ್ಚು ಓದಿದ್ದು

Trending videos

Back to Top