CONNECT WITH US  

ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಸಿದ್ಧ

ಚಿಂತಾಮಣಿ: ತಾಲೂಕಿನ ಯಾವುದೇ ಹಳ್ಳಿಯಲ್ಲಿಯೂ ಕೂಡ ರಸ್ತೆ ಕಾಮಗಾರಿ ಬಾಕಿ ಉಳಿಯಬಾರದು. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇವೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.

ತಾಲೂಕಿನ ಕೈವಾರದ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿ, ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗುವುದು ಕಷ್ಟಕರವಾಗಿದ್ದರೂ ಕೂಡ, ಪ್ರತಿಯೊಬ್ಬ ಮತದಾರರು ತಾನೇ ಎಂಎಲ್‌ಎ ಅಭ್ಯರ್ಥಿ ಎಂದು ತಿಳಿದು ಸೈನಿಕರಂತೆ ಶ್ರಮಬಹಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ವಿಧಾನಸಭೆ ಉಪಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವ ಭಾಗ್ಯ ನನಗೆ ಸಿಕ್ಕಿದ್ದು, ತನ್ನ ಜೀವಮಾನದವರೆಗೂ ಚಿಂತಾಮಣಿಯ ಜನತೆಯನ್ನು ಮರೆಯುವುದಿಲ್ಲ. ನನ್ನ ಅವಧಿಯಲ್ಲಿ ಚಿಂತಾಮಣಿ ಅಭಿವೃದ್ಧಿಗೆ ದುಡಿದು, ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಕ್ಕೆ ಸಿದ್ಧರಾಗಿದ್ದೇವೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಶೇಕ್‌ ಮೌಲಾ, ಮಾಜಿ ಎಪಿಎಂಸಿ ಸದಸ್ಯ ಸುಬ್ಟಾರೆಡ್ಡಿ, ಬನಹಳ್ಳಿ ರವಿ, ಗ್ರಾಪಂ ಸದಸ್ಯರಾದ ರಾಮಚಂದ್ರಪ್ಪ, ದಾದಾಪೀರ್‌, ಉಮಾದೇವಿ, ಸೈಯದಾ ಬಾನು, ಶ್ರೀಮತಿ ಮಂಜುನಾಥ್‌, ಮುಖಂಡರಾದ ಶೌಕತ್‌ ಬಾಷಾ, ಆಶ್ವತ್ಥರೆಡ್ಡಿ, ಅಲ್ಲಿಸಾಬಿ, ಶ್ಯಾಮರಾಜ್‌, ಪ್ರಕೃತಿ, ಅಬ್ದುಲ್‌ ಸಮದ್‌ ಉಪಸ್ಥಿತಿರಿದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top