CONNECT WITH US  

ರದ್ದಾದ ನೋಟು ನೆನಪಿಗಾಗಿ ರಾಷ್ಟ್ರೀಯ ಸ್ಮಾರಕ ಸ್ಥಾಪನೆಗೆ ನಿರ್ಧಾರ!

ನವದೆಹಲಿ: ನೋಟು ಅಪನಗದೀಕರಣದ ಅವಧಿ ಮುಗಿಯಲು ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿವೆ. ನಂತರದಿಂದ ಹಳೆಯ 500 ರೂ. ಮತ್ತು 1000 ರೂ. ನೋಟುಗಳು ಎಲ್ಲಿಯೂ ಕಾಣ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಕಾಲದಲ್ಲಿ ಎಲ್ಲರ ಕಿಸೆಯಲ್ಲೂ ರಾರಾಜಿಸಿದ್ದ ಹಳೆಯ 500 ರೂ. ಮತ್ತು 1000 ರೂ. ನೋಟುಗಳ ನೆನಪಿಗಾಗಿ ಮುಂಬೈ ಅಥವಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರೀಯ ಸ್ಮಾರಕ ಸ್ಥಾಪಿಸುವಂತೆ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಲ್ಲದೇ ಸ್ಮಾರಕ ಸ್ಥಾಪನೆಗೆ ತಗಲುವ ಖರ್ಚು ವೆಚ್ಚಗಳಿಗೆ ರದ್ದಾದ ನೋಟುಗಳನ್ನೇ ಬಳಸುವುದಕ್ಕೂ ಆರ್‌ ಬಿಐ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರ ಈ ಶಿಫಾರಸಿಗೆ ಒಪ್ಪಿಗೆ ಸೂಚಿಸಿದೆ. ಜತೆಗೆ 500 ರೂ. ಮತ್ತು 1000 ರೂ. ನೋಟುಗಳ ಪುತ್ಥಳಿ ಸ್ಥಾಪಿಸುವುದಕ್ಕೂ ಒಪ್ಪಿಕೊಂಡಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Trending videos

Back to Top