CONNECT WITH US  

ದೆಹಲಿಯಲ್ಲಿ ನಜೀಬ್‌ ಜಂಗ್‌ ಜಾಗಕ್ಕೆ ಮನ್ಮೋಹನ ಸಿಂಗ್‌!

ದೆಹಲಿ: ಕೇಂದ್ರಾಡಳಿತ ಪ್ರದೇಶ ದೆಹಲಿಯ  ಉಪರಾಜ್ಯಪಾಲರ ಸ್ಥಾನಕ್ಕೆ ಮಾಜಿ ಪ್ರಧಾನಿ  ಮನಮೋಹನ್‌ ಸಿಂಗ್‌ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಜೀಬ್‌ ಜಂಗ್‌ ಅವರಿಂದ ತೆರವಾದ ಸ್ಥಾನಕ್ಕೆ ಮನಮೋಹನ್‌ ಸಿಂಗ್‌ ಅವರು ನೇಮಕವಾಗಲಿದ್ದಾರೆ. ಈ ಮೊದಲು ನಜೀಬ್‌ ಮತ್ತು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ಮಧ್ಯೆ ಸದಾ ಜಗಳ ನಡೆಯುತ್ತಲೇ ಇದ್ದು, ಪರಸ್ಪರ ವಾಗ್ಯುದ್ಧ ಸಾಮಾನ್ಯವಾಗಿತ್ತು. ಆದರೆ ಮನಮೋಹನ್‌
ಅವರನ್ನು ನೇಮಕ ಮಾಡಿದರೆ, ಇಂಥದ್ದಕ್ಕೆ ಅವಕಾಶವೇ ಇರಲಾರದು. ಕೇಜ್ರಿವಾಲ್‌ ಅವರ ಯಾವುದೇ
ಹೇಳಿಕೆಗೂ ಅವರು ತುಟಿಪಿಟಕ್ಕೆನ್ನುವುದಿಲ್ಲ. ಇದರಿಂದ ಆಡಳಿತ ಶಾಂತವಾಗಿರುತ್ತದೆ ಎಂದು ಹೇಳಲಾಗಿದೆ. ಸದ್ಯ
ಸ್ಥಾನ ಸ್ವೀಕರಿಸುವಂತೆ ಮನಮೋಹನ್‌ ಸಿಂಗ್‌ ಅವರನ್ನು ಬಿಜೆಪಿ ವತಿಯಿಂದ ಮನವೊಲಿಸಲಾಗುವುದು ಎಂದು
ಮೂಲಗಳು ಸುಳ್‌ಸುದ್ದಿಗೆ ಹೇಳಿವೆ.

Trending videos

Back to Top